ಬಂಟ್ವಾಳ: ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಪುನರ್ ನವೀಕರಣಗೊಂಡಿದ್ದು ಬ್ರಹ್ಮಕಲಶೋತ್ಸವವು ಫೆ. 12ರಿಂದ ಫೆ. 17ರವೆರೆಗೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶುಕ್ರವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ, ಉಪಾಧ್ಯಕ್ಷ ಕೃಷ್ಣ ಟಿ. ಕನಪಾದೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ, ಉಪಾಧ್ಯಕ್ಷರುಗಳಾದ ಕರುಣೇಂದ್ರ ಪೂಜಾರಿ ಕೊಂಬ್ರಬೈಲ್, ವಿಲಾಸಿನಿ ಶಾಂತವೀರ ಫರ್ಲಾ, ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಗೌಡ ಕರೆಂಕಿ, ಉಪಾಧ್ಯಕ್ಷ ಪೂವಪ್ಪ ಮೆಂಡನ್ ಕರೆಂಕಿ, ವಿಠಲ ಡಿ., ಕಾರ್ಯದರ್ಶಿ ಮನೋಜ್ ಕುಮಾರ್ ಕರೆಂಕಿ, ಮಹಿಳಾ ಸಮಿತಿಯ ಅಧ್ಯಕ್ಷೆ ಹರ್ಷಿತಾ ಕರೆಂಕಿ, ಉಪಾಧ್ಯಕ್ಷೆ ಲಕ್ಷ್ಮೀ ಕರೆಂಕಿ ಹಾಗೂ ಪ್ರಚಾರ ಸಮಿತಿಯ ಸಂಚಾಲಕರಾದ ಮನ್ಮಥ ಜೆ ಶೆಟ್ಟಿ, ಹಾಗೂ ಚೇತನಾ ಆರ್. ಶೆಟ್ಟಿ ದಂಡೆ, ಆನಂದ ಕರೆಂಕಿ, ಗಣೇಶ್ ಗೌಡ ಕರೆಂಕಿ, ಸಂತೋಷ್ ದಾಸರಕೋಡಿ, ನವೀನ್ ಕುಲಾಲ್, ಧನುಷ್ ಟಿ. ಕರೆಂಕಿ, ಧನ್ರಾಜ್ ಕರೆಂಕಿ, ಅವಿನಾಶ್ ಕರೆಂಕಿ, ಚಿನ್ನಮ್ಮ, ಯೋಗಿನಿ, ಮೀನಾಕ್ಷಿ ಮಣಿ ಉಪಸ್ಥಿತರಿದ್ದರು.