ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ 13 ನೇ ಮೆಲ್ಕಾರ್ ಶಾಖೆಯು ಮೆಲ್ಕಾರ್ನ ಆರ್.ಆರ್.ಕಮರ್ಷಿಯಲ್ ಸೆಂಟರ್ ನ ನೆಲ ಅಂತಸ್ತಿನಲ್ಲಿ ಗುರುವಾರ ಶುಭಾರಂಭಗೊಂಡಿತು.
ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ನೂತನ ಶಾಖೆಯನ್ನು ದೀಪ ಬೇಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಸ್ವಾತಂತ್ತ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಸಹಕಾರ ಚಿಂತನೆ ಇಂದು 13 ಶಾಖೆಗಳ ಮೂಲಕ ವಿಸ್ತಾರಗೊಂಡಿರುವುದು ಇಡೀ ಸಮಾಜಕ್ಕೆ ಹೆಮ್ಮೆ ಎಂದು ನುಡಿದರು.ಸಮಾಜದ ಅಭಿವೃದ್ಧಿ ಹಾಗೂ ಅಭ್ಯುದಯಕ್ಕೆ ಬಾಳಪ್ಪ ಹಾಗೂ ಹೂವಯ್ಯರು ಕನಸು ಕಂಡಿದ್ದರು, ಬ್ಯಾಂಕ್ ಕಷ್ಟದಲ್ಲಿಯೇ ಆರಂಭವಾಗಿದ್ದರೂ, ಪ್ರಸ್ತುತ ಲಾಭದಲ್ಲಿ ಮುಂದುವರಿದಿದೆ, ಇದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಕ್ರಿಯಾಶೀಲತೆಯನ್ನು ತೋರಿಸುತ್ತದೆ ಎಂದ ಶ್ರೀಗಳು ಆರ್ಥಿಕ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲಿ, ಮಧ್ಯಮ ಕ್ಷೇತ್ರದ ವ್ಯವಹಾರ ಕ್ಕೆ ಸಹಕಾರಿಬ್ಯಾಂಕ್ ಗಳ ಕೊಡುಗೆ ಮಹತ್ತರವಾದದ್ದು , ಸ್ವಸಹಾಯ ಸಂಘಗಳ ಪ್ರಾಮಾಣಿಕತನ ಬ್ಯಾಂಕಿನ ಆರ್ಥಿಕ ಚೈತನ್ಯಕ್ಕೆ ಕಾರಣವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು. ಆರ್ಥಿಕ ಕೇತ್ರಕ್ಕೆ ಶಕ್ತಿ ತುಂಬುವ ಸಹಕಾರಿ ತತ್ವ ದೇಶದ ಅಭಿವೃದ್ದಿಗೂ ಪೂರಕವಾಗಿದೆ. ಪ್ರಧಾನಿಯವರ ಯೋಜನೆ, ಚಿಂತನೆಗಳು ಮಧ್ಯಮವರ್ಗದ ಜನರಿಗೂ ಸಕಾಲದಲ್ಲಿ ತಲುಪಬೇಕಾಗಿದೆ ಎಂದರು. ದೇಶದ ಭಾರತೀಯ ಪರಂಪರೆ ಉಳಿಯುವ ನಿಟ್ಟಿನಲ್ಲಿ ಮತ್ತು ಸದೃಢಸಮಾಜದ ನಿರ್ಮಾಣಕ್ಕಾಗಿ ವಾರದ ಎರಡು ದಿನವಾದರೂ ಒಂದಷ್ಟು ಹೊತ್ತು ಬಿಡುವು ಮಾಡಿಕೊಂಡು ಭಗವಂತನ ನಾಮಸ್ಮರಣೆ ಮಾಡುವುದರ ಜೊತೆಗೆ ನಮ್ಮಲ್ಲಿರುವ ದುರ್ಗಣವನ್ನು ದೂರಮಾಡಿ ಸದ್ಗುಣ ಬೆಳಸಿಕೊಳ್ಳಬೇಕು,ಸಮಾಜದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುವವರಿಗೆ ಸದಾ ಪ್ರೋತ್ಸಾಹಿಸುವ ಕಾರ್ಯಮಾಡಬೇಕು ಎಂದರು.
ಸೇಫ್ಲಾಕರ್ ಉದ್ಘಾಟಿಸಿ, ಬಳಿಕ ಠೇವಣಿ ಪತ್ರ ಬಿಡುಗಡೆಗೊಳಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಬ್ಯಾಂಕ್ ಹಾಗೂ ಶಾಲೆ ಆಯಾ ಸಮುದಾಯದ ಏಳಿಗೆಗೆ ಕಾರಣವಾಗುತ್ತದೆ. ಸಮಾಜಸೇವಾ ಸಹಕಾರಿ ಬ್ಯಾಂಕ್ ಆರ್ಥಿಕ ಅಭಿವೃದ್ಧಿಯ ಕಾರ್ಯದ ಜೊತೆಗೆ ಸಮಾಜದ ಅಭಿವೃದ್ಧಿಗೂ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಗುತ್ತು ಸಮಾರಂಭದ ಅಧ್ಯಕ್ಷತೆ ವಹಿಸಿ, ಅಮೂಲ್ಯ ಸ್ವಸಹಾಯ ಸಂಘದ ಸದಸ್ಯರನ್ನು ಗೌರವಿಸಿ ಮಾತನಾಡಿ, ಸಹಕಾರಿ ಸಂಘಗಳು ಜಿಲ್ಲೆಯ ಆರ್ಥಿಕ ಚೈತನ್ಯವನ್ನು ಹೆಚ್ಚಿಸಿದೆ, ಐದು ರಾಷ್ಟ್ರೀಯ ಬ್ಯಾಂಕುಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಹುಟ್ಟಿರುವುದು ನಮ್ಮ ಹೆಮ್ಮೆ ಎಂದರು. ಸಾಲ ವಸೂಲಾತಿಯಲ್ಲಿಯೂ ಮುನ್ನಡೆ ಕಾಣುವುದು ಬ್ಯಾಂಕ್ ಹಾಗೂ ಗ್ರಾಹಕರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಅತಿಥಿಯಾಗಿದ್ದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ಪಿಗ್ಮಿಸಂಗ್ರಾಹಕನಿಗೆ ಯಂತ್ರವನ್ನು ವಿತರಿಸಿ ಶುಭ ಹಾರೈಸಿದರು. ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜಸಿಂತಾ ಡಿಸೋಜ, ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಶ್ರೀಕ್ಷೇತ್ರ ಪಣೋಲಿಬೈಲಿನ ಪ್ರಧಾನ ಅರ್ಚಕ ವಾಸುದೇವ ಮೂಲ್ಯ, ಪಾಣೆಮಂಗಳೂರು ರೈ.ಸೇ.ಸ.ಸಂಘದ ಅಧ್ಯಕ್ಷ ಜಯಶಂಕರ ಬಾಸ್ರೀತ್ತಾಯ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ್, ಆರ್.ಆರ್.ಕಮರ್ಷಿಯಲ್ ಸೆಂಟರ್ ನ ಮಾಲಕ ರಾಮರಾಜ್ ರಾವ್, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೀತಾರಾಮ ಬಂಗೇರ ಕೊಲ್ಯ ಅವರು ಅತಿಥಿಗಳಾಗಿ ಭಾಗವಹಿಸಿ ಸಂಘದ ನೂತನ ಶಾಖೆಗೆ ಶುಭಕೋರಿದರು. ಇದೇವೇಳೆ ಕಟ್ಟಡದ ಮಾಲಕ ರಾಮರಾಜ್ ರಾವ್, ಪ್ರಸಕ್ತ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೀತಾರಾಮ ಬಂಗೇರ ಕೊಲ್ಯ ಅವರನ್ನು ಗೌರವಿಸಲಾಯಿತು. ಕುಲಾಲ ಕುಂಬಾರರ ಯುವವೇದಿಕೆಯ ಸೇವಾ ಕಾರ್ಯಗಳಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಸಂಘ ದ ಅಧ್ಯಕ್ಷ ಸುರೇಶ್ ಕುಲಾಲ್, ನಿರ್ದೇಶಕರಾದ ವಿಶ್ವನಾಥ ಕೆ.ಬಿ., ರಮೇಶ್ ಸಾಲಿಯಾನ್, ಬಿ.ರಮೇಶ್ ಸಾಲ್ಯಾನ್, ನಾಗೇಶ್ ಬಾಳೆಹಿತ್ಲು, ವಾಮನ ಟೈಲರ್, ಸುರೇಶ್ .ಎನ್, ಸತೀಶ್, ವಿಜಯಕುಮಾರ್, ಜನಾರ್ದನ ಬೊಂಡಾಲ, ಜಗನ್ನಿವಾಸ ಗೌಡ, ಎಂ.ಕೆ.ಗಣೇಶ್ ಸಮಗಾರ, ವಿದ್ಯಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಪದ್ಮನಾಭ ವಿಟ್ಲ ಅವರು ಸ್ವಾಗತಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ಪ್ರಸ್ತಾವಿಸಿ, 2019-20 ನೇ ಸಾಲಿನಲ್ಲಿ ಸಂಘವು ಒಟ್ಟು 526 ಕೋ.ರೂ.ವ್ಯವಹಾರವನ್ನು ಮಾಡಿದ್ದು,1,78 ಕೋ.ರೂ.ಲಾಭ ಗಳಿಸಿ,ಸದಸ್ಯರಿಗೆ ಶೇ.15 ಡಿವಿಡೆಂಡ್ ನ್ನು ವಿತರಿಸಲಾಗಿದೆ 11.53 ಕೋ.ರೂ.ಸಾಲ ನೀಡಿ ಶೇ.95.10 ರಷ್ಟು ವಸೂಲಾತಿ ಮಾಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೆರಡು ಶಾಖೆಯನ್ನು ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಸಹಕಾರಿಯ ಹಿತದೃಷ್ಟಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆನ್ ಲೈನ್ ಮೂಲಕ ಸೇವೆ ನೀಡಲು ಯೋಚಿಸಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾನಿಧಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆದೇರೀತಿ ಸದಸ್ಯರಿಗೆ ಸೇಫ್ ಲಾಕರ್ ಸೌಲಭ್ಯ, ಗಂಭೀರ ಕಾಯಿಲೆಗೊಳಗಾದ ಸದಸ್ಯರಿಗೆ ಆರ್ಥಿಕ ನೆರವು, ಗ್ರಾಹಕರಿಗೆ ಪ್ರಧಾನಮಂತ್ರಿ ಸುರಕ್ಷಾ ಯೋಜನೆಯನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು. ಆರ್ .ಎಸ್ .ಎಸ್ ಪ್ರಮುಖ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಅಗಮಿಸಿ ನೂತನ ಶಾಖೆಗೆ ಶುಭಹಾರೈಸಿದರು. ನಿರ್ದೇಶಕ ಅರುಣ್ ಕುಮಾರ್ ವಂದಿಸಿದರು. ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
ನೂತನ ಶಾಖೆಯ ಉದ್ಘಾಟನೆ ಯ ದಿನವೇ ರೂಪಾಯಿ 2 ಕೋಟಿ 32 ಲಕ್ಷಕ್ಕೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸಮಾಜ ಸೇವಾ ಸಹಕಾರಿ ಸಂಘ ದಾಖಲೆ ಸೃಷ್ಟಿಸಿದೆ