ಬಂಟ್ವಾಳ: ಬಂಟ್ವಾಳ ಬೈಪಾಸ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಇದರ 13ನೇ ಮೆಲ್ಕಾರ್ ಶಾಖೆಯ ಉದ್ಘಾಟನಾ ಸಮಾರಂಭ ಮೆಲ್ಕಾರ್ನ ಆರ್.ಆರ್. ಕಮರ್ಷಿಯಲ್ ಸೆಂಟರ್ನ ನೆಲ ಅಂತಸ್ತಿನ ಕಟ್ಟಡದಲ್ಲಿ ನಡೆಯಲಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.
ಶನಿವಾರ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಅಮ್ಟೂರು ದೇವಮಾತ ಇಗರ್ಜಿಯ ಧರ್ಮಗುರುಗಳಾದ ಡಾ. ಮಾರ್ಕ್ ಕ್ಯಾಸ್ಟಲನೋ ಅವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿರುವರು, ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೂತನ ಶಾಖೆಯನ್ನು ಉದ್ಘಾಟಿಸುವರು, ಸಂಸದ ನಳಿನ್ ಕುಮಾರ್ ಕಟೀಲು ಭದ್ರತಾ ಕೊಠಡಿ ಉದ್ಘಾಟಿಸುವರು, ಮಾಜಿ ಸಚಿವ ಬಿ.ರಮಾನಾಥ ರೈ ಸೇಫ್ ಲಾಕರ್ ಉದ್ಘಾಟಿಸುವರು, ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್ ಕಂಪ್ಯೂಟರ್ ಉದ್ಘಾಟಿಸುವರು, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಕುಮಾರ್ ಠೇವಣಿ ಪತ್ರ ಬಿಡುಗಡೆಗೊಳಿಸುವರು, ಸಹಾಯಕ ಉಪನಿಬಂಧಕ ಜೆ. ಸುಧೀರ್ ಕುಮಾರ್, ಪುರಸಭಾ ಸದಸ್ಯ ಮಹಮ್ಮದ್ ಶರೀಫ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಮಾತನಾಡಿ 131 ಸದಸ್ಯರಿಂದ 22,620 ಪಾಲು ಬಂಡವಾಳದೊಂದಿಗೆ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಪ್ರಸ್ತುತ ಬಂಟ್ವಾಳ ಪೇಟೆ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬೈಪಾಸ್, ಪಡೀಲು, ಕಲ್ಲಡ್ಕ, ಬಜಪೆ, ಬಿ.ಸಿ.ರೋಡು, ಪುಂಜಾಲಕಟ್ಟೆ ಮತ್ತು ಪುತ್ತೂರಿನಲ್ಲಿ ಒಟ್ಟು 12 ಶಾಖೆಗಳನ್ನು ಹೊಂದಿದ್ದು ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡಿಕೊಂಡು ಬಂದಿದೆ. 2020ರ ಮಾರ್ಚ್ ಅಂತ್ಯಕ್ಕೆ ಒಟ್ಟು 6951ಎ ತರಗತಿ ಸದಸ್ಯರಿದ್ದು ರೂ. 7.07ಕೋಟಿ ಪಾಲು ಬಂಡವಾಳ, ರೂ. 145.34 ಕೋಟಿ ಠೇವಣಿ ಹೊಂದಿದ್ದು ರೂ. 111.52 ಕೋಟಿ ಸಾಲ ನೀಡಲಾಗಿದೆ. ರೂ. 9.84ಕೋಟಿ ನಿಧಿ ಹೊಂದಿ, 48.40 ಕೋಟಿ ವಿನಿಯೋಗ ಮಾಡಿದೆ ಎಂದು ತಿಳಿಸಿದರು. ದುಡಿಯುವ ಬಂಡವಾಳ ರೂ. 164.34 ಕೋಟಿ ಹೊಂದಿದೆ, 2020ರ ಮಾರ್ಚ್ ವೇಳೆಗೆ ರೂ. 1.78ಕೋಟಿ ಲಾಭ ಗಳಿಸಿ ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗಿದೆ. 526 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದ್ದು 2019-20ನೇ ಸಾಲಿನಲ್ಲಿ ಆಡಿಟ್ ವರ್ಗಿಕರಣ ಎ ಶ್ರೇಣಿಯಾಗಿದ್ದು 95.10 ಶೇಕಡವಾರು ವಸೂಲಾತಿ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಪದ್ಮನಾಭ ವಿ, ನಿರ್ದೇಶಕರಾದ ವಿಶ್ವನಾಥ ಕೆ.ಬಿ, ರಮೇಶ್ ಸಾಲ್ಯಾನ್, ಅರುಣ್ ಕುಮಾರ್, ಬಿ.ರಮೇಶ್ ಸಾಲ್ಯಾನ್, ನಾಗೇಶ್ ಬಿ., ಎಂ. ವಾಮನ ಟೈಲರ್, ಸುರೇಶ್ ಎನ್., ಸತೀಶ, ವಿಜಯ ಕುಮಾರ್, ಜಯಂತಿ, ವಿದ್ಯಾ, ಜನಾರ್ದನ ಬೊಂಡಾಲ, ಜಗನ್ನಿವಾಸ ಗೌಡ, ಎಂ.ಕೆ. ಗಣೇಶ ಸಮಗಾರ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.