ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಡಾ. ಗೀತಪ್ರಕಾಶ್ ಎ. ಅವರ ಅಧಿಕೃತ ಭೇಟಿ ವಾತ್ಸಲ್ಯ ಸಂಗಮ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ಬುಧವಾರ ನಡೆಯಿತು.
ಜಿಲ್ಲಾ ಗವರ್ನರ್ ಡಾ. ಗೀತ್ಪ್ರಕಾಶ್ ಮಾತನಾಡಿ ಕೊರೋನಾ ಬ್ರೇಕ್ ಬಳಿಕ ಲಯನ್ಸ್ ಸದಸ್ಯರು ಒಂದೆಡೆ ಸೇರಿ ಜೊತೆಯಾಗಿ ಸಂಭ್ರಮಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಲಯನ್ಸ್ ಸದಸ್ಯರು ಮತ್ತೆ ಜೊತೆಯಾಗಿ ಸೇರಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಎಷ್ಟೇ ಅಲಂಕಾರ ಮಾಡಿದರು ಮುಖದಲ್ಲಿ ಮುಗುಳ್ನಗು ಇಲ್ಲದೆ ಇದ್ದರೆ ಅಲ್ಲಿವರೆಗೆ ನಮ್ಮ ಸೌಂದರ್ಯ ಪೂರ್ತಿಯಾಗುವುದಿಲ್ಲ ಎಂದು ತಿಳಿಸಿದ ಅವರು ಜಿಲ್ಲಾ ಮಟ್ಟದಲ್ಲಿ ಕೈಗೊಂಡ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎ. ಕೃಷ್ಣಶ್ಯಾಮ್ ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲ ಸದಸ್ಯರ ಸಹಕಾರದಿಂದ ಲಯನ್ಸ್ ಕ್ಲಬ್ ಬಂಟ್ವಾಳ ಹಲವಾರು ಸೇವಾಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಜಿಲ್ಲೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುವುದಲ್ಲದೆ ಸೇವಾ ಕಾರ್ಯಗಳಿಗಾಗಿ ಜಿಲ್ಲೆಯ ಟಾಪ್ 10 ಕ್ಲಬ್ಗಳ ಪೈಕಿ ಬಂಟ್ವಾಳವೂ ಒಂದಾಗಿರುವುದು ನಮಗೆ ಹೆಮ್ಮೆ ತಂದಿದೆ ಎಂದರು. ಇದೇ ಸಂದರ್ಭ ಬಂಟ್ವಾಳ ಘಟಕದ ದೇಣಿಗೆಯನ್ನು ನೀಡಲಾಯಿತು. ಸೇವಾ ಕಾರ್ಯಗಳಿಗೆ ಸಹಕರಿಸಿದ ಕ್ಲಬ್ನ ಸದಸ್ಯರನ್ನು ಗೌರವಿಸಲಾಯಿತು.
ರಾಜ್ಯಪಾಲ ಗೀತಪ್ರಕಾಶ್ ದಂಪತಿಯನ್ನು ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕ್ಲಬ್ನ ಹಿರಿಯ ಸದಸ್ಯ ಡಾ.ಗಂಗಾಧರ ದಂಪತಿಗಳನ್ನು ವಿವಾಹ ವಾರ್ಷಿಕೋತ್ಸವನ್ನು ಆಚರಿಸಲಾಯಿತು. ಪ್ರಥಮ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಕ್ಲಬ್ಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ದೇಣಿಗೆ ನೀಡಿದ ಕ್ಲಬ್ ಸದಸ್ಯರನ್ನು ಹಾಗೂ ಜಿಲ್ಲಾ ಘಟಕದಲ್ಲಿ ಜವಬ್ದಾರಿ ನಿರ್ವಹಿಸಿದ ಸದಸ್ಯರನ್ನು ಗವರ್ನರ್ ಗೌರವಿಸಿದರು.
ವೇದಿಕೆಯಲ್ಲಿ ಜಿಲ್ಲಾ ಗವರ್ನರ್ ಅವರ ಸಂಯೋಜಕಿ ಅರುಣಾ ಶೆಟ್ಟಿ, ಜಿ.ಆರ್. ಶೆಟ್ಟಿ
ಸಂಪುಟ ಕಾರ್ಯದರ್ಶಿಗಳಾದ ಸಿ. ಪಿ. ದಿನೇಶ್, ಮಂಗೇಶ್ ಭಟ್, ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್, ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ, ಸಲಹೆಗಾರ ರಾಧಕೃಷ್ಣ ರೈ, ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ, ವಲಯ ಸಲಹೆಗಾರ ಆಶಾ ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.
ಕ್ಲಬ್ ಕಾರ್ಯದರ್ಶಿ ವೈಕುಂಠ ಕುಡ್ವ ವರದಿ ವಾಚಿಸಿದರು. ಕೋಶಾಧಿಕಾರಿ ದಿಶಾ ಆಶೀರ್ವಾದ್ ಉಪಸ್ಥಿತರಿದ್ದರು. ಪ್ರಾಂತೀಯ ಕಾರ್ಯದರ್ಶಿ ಮದ್ವರಾಜ್ ಕಲ್ಮಾಡಿ ವಂದಿಸಿದರು. ನಿಕಟ ಪೂರ್ವ ಕಾರ್ಯದರ್ಶಿ ರಾಧಕೃಷ್ಣ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಸೇವಾ ಕಾರ್ಯಕ್ರಮವಾಗಿ ಸೆರ್ಕಳ ಶಾಲೆಗೆ ಕೊಠಡಿ, ಪಣೋಲಿಬೈಲಿನಲ್ಲಿ ಪುನರ್ ನವೀಕೃತ ಬಸ್ಸು ನಿಲ್ದಾಣ ಮಂಜಲ್ಪಾದೆ ಅಂಗನವಾಡಿ ಕೇಂದ್ರಕ್ಕೆ 5 ಸೆಂಟ್ಸ್ ಜಮೀನಿನ ದಾನಪತ್ರ, ಮಾರ್ನ ಬೈಲು ಆರೋಗ್ಯ ಉಪಕೇಂದ್ರದಲ್ಲಿ ಸೋಲಾರ್ ಘಟಕ ಹಸ್ತಾಂತರ, ನರಿಕೊಂಬು ಶಾಲೆಗೆ ನೀರು ಶುದ್ದೀಕರಣ ಘಟಕ, ಮಿತ್ತೂರು ಶಾಲೆಗೆ ಚಿಲ್ಡ್ರನ್ ಪಾರ್ಕ್ ಹಾಗೂ ನಿರ್ಮಲ ಹೃದಯ ವಿಶೇಷ ಚೇತನ ಮಕ್ಕಳ ಪಾಲನ ಕೇಂದ್ರಕ್ಕೆ ಶುದ್ದ ಕುಡಿಯುವ ನೀರಿನ ಯಂತ್ರವನ್ನು ರಾಜ್ಯಪಾಲರ ಅಧಿಕೃತ ಭೇಟಿಯ ವೇಳೆ ಕೊಡುಗೆಯಾಗಿ ನೀಡಲಾಯಿತು.