ಬಂಟ್ವಾಳ: ಕರ್ನಾಟಕ ರಾಜ್ಯ ಕುಂಬಾರರ ಕುಲಾಲರ ಯುವ ವೇದಿಕೆಗಳ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದಪ್ರಧಾನ ಸಮಾರಂಭ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷ ಸತೀಶ್ ಜಕ್ರಿಬೆಟ್ಟು, ಕಾರ್ಯದರ್ಶಿ ಪುನೀತ್, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಜಿಲ್ಲಾ ಪ್ರತಿನಿಧಿಯಾಗಿ ಕಾರ್ತಿಕ್ ಮಯ್ಯರ ಬೈಲು ಹಾಗೂ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯಿತು. ಬಳಿಕ ನಿರ್ಗಮನ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ಅವರನ್ನು ಸನ್ಮಾನಿಸಲಾಯಿತು.
ಚಿತ್ರನಟ ವಿಶ್ವನಾಥ್ಅಸೈಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮನ ಜಾಗೃತಿಯಾಗದೆ ಜನಜಾಗೃತಿ ಯಾಗದು. ಯೋಚನೆ, ಯೋಜನೆಯಿಂದ ಸಮುದಾಯದ ಬಂಧುಗಳು ಸೇರಿಕೊಂಡು ನಡೆಯುವ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು. ವಿದ್ಯಾಭ್ಯಾಸದೊಂದಿಗೆ ಇನ್ನಿತರ ವಟುವಟಿಕೆಯಲ್ಲೂ ಕುಲಾಲ ವಿದ್ಯಾರ್ಥಿಗಳು ಸಕ್ರಿಯರಾಗಬೇಕು ಆಗ ಮಾತ್ರ ಹಲವಾರು ಅವಕಾಶಗಳು ನಮನ್ನು ಅರಸಿ ಬರಲಿವೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಪೇಂದ್ರ ಮೂಲ್ಯ, ಚಂದಪ್ಪ ಮೂಲ್ಯ, ಕಿಟ್ಟು ಮೂಲ್ಯ, ಮಾಧವ, ಎಚ್ಕೆ ನಯನಾಡು ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ನೀಲಮ್ಮ ಮಡಂತ್ಯಾರು ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂಬಾರ ಕುಲಾಲ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ ಸಂಘಟನೆಗಳು ಬೆಳೆಯ ಬೇಕಾದರೆ ಯುವಕರಿಗೆ ನಾಯಕತ್ವ ನೀಡಬೇಕು, ಯುವಕರನ್ನು ಸಂಘಟಿಸಬೇಕು,ಬಂಟ್ವಾಳ ಯುವ ವೇದಿಕೆ ಕೊರೊನಾ ಸಮಯದಲ್ಲಿ ಜೇನು ನೊಣದಂತೆ ಸಂಘಟಿತ ಕೆಲಸ ಮಾಡಿದೆ ಎಂದರು. ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ತೇಜಸ್ವಿ ರಾಜ್ ಮಾತನಾಡಿ ಯುವ ವೇದಿಕೆಯಂತಹ ಸಂಘಟನೆಗಳಲ್ಲಿ ಮಹಿಳೆಯರಿಗೂ ಹೆಚ್ಚಿನ ಅವಕಾಶ ನೀಡಬೇಕು ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಕೃಷ್ಣಶ್ಯಾಂ, ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಧಾಕರ ಸಾಲ್ಯಾನ್ ಸುರತ್ಕಲ್, ಪುರಸಭೆ ಸದಸ್ಯೆ ಶೋಭಾ ಹರಿಶ್ಚಂದ್ರ,
ನಿರ್ಗಮನ ಅಧ್ಯಕ್ಷ ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿ ಬೆಟ್ಟುವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ನಾರಾಯಣ ಸಿ. ಪೆರ್ನೆ ಸ್ವಾಗತಿಸಿದರು, ಶೇಷಪ್ಪ ಮೂಲ್ಯ ಟಿ. ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪುನಿತ್ ವಂದಿಸಿದರು . ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.