ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ರೋಟರಿ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಜ. ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ ತಿಂಗಳ ಪ್ರತಿ ಮಂಗಳವಾರ ನಡೆಯುವ ಉಚಿತ ಕಣ್ಣು ತಪಾಸಣಾ ಶಿಬಿರ ಫರಂಗಿಪೇಟೆಯ ಸೇವಾಂಜಲಿಯಲ್ಲಿ ನಡೆಯಿತು.
ಉದ್ಯಮಿ ಸೇಸಪ್ಪ ಕೋಟ್ಯಾನ್ ದೀಪ ಪ್ರಜ್ವಲಿಸಿ ಶಿಬಿರ ಉದ್ಘಾಟಿಸಿದರು. ರೋಟರಿ ಕ್ಲಬ್ ನ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಣ್ಣು ಮನುಷ್ಯನ ದೇಹದ ಅತೀ ಪ್ರಾಮುಖ್ಯತೆ ಅಂಗ.ಕಣ್ಣಿನ ರಕ್ಷಣೆ ಪ್ರತಿಯೊಬ್ಬನ ಕರ್ತವ್ಯವೂ ಹೌದು ಎಂದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿಸಕೊಳ್ಳುವ ಉದ್ದೇಶದದ ಸೇವಾಂಜಲಿ ಪ್ರತಿಷ್ಠಾನ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ನಡೆಸಿಕೊಂಡು ಬರುತ್ತಿದೆ. ಅದರೆ ಕೋವಿಡ್ ಕಾರಂಣದಿಂದಾಗಿ ಕೆಲ ಸಮಯ ನಿಂತು ಹೋಗಿತ್ತು. ಇದೀಗ ಮತ್ತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಣ್ಣಿನ ತಪಾಸಣಾ ಶಿಬಿರವನ್ನು ಪುನಾರಂಭಿಸಲಾಗಿದೆ ಎಂದು ತಿಳಿಸಿದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಕೆ. ನಾರಾಯಣ ಹೆಗ್ಡೆ, ಪೂರ್ವಾಧ್ಯಕ್ಷ ಸಂಜೀವ ಪೂಜಾರಿ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಕೆ. ಎಸ್ ಹೆಗ್ಡೆ ಆಸ್ಪತ್ರೆ ಕಣ್ಣಿನ ತಜ್ಞ ಡಾ.ಪುನೀತ್,
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಮಮತಾ, ಪ್ರಮುಖರಾದ ತಾರನಾಥ ಕೊಟ್ಡಾರಿ ತೇವು, ದೇವದಾಸ್ ಶೆಟ್ಟಿ ಕೊಡ್ಮಾನ್, ಜಯರಾಜ್ ಕರ್ಕೆರಾ ಮಂಟಮೆ,ಪ್ರಕಾಶ್ ಕಿದೆಬೆಟ್ಟು, ಸುಕುಮಾರ್, ಅರ್ಕುಳ ಸಾಜಿದ್ ಒಡೆಯರ್,
ಎಂ.ಕೆ. ಖಾದರ್, ವಿಕ್ರಂ ಬರ್ಕೆ, ಪ್ರಶಾಂತ್ , ವಿದ್ಯಾ ಶಿವರಾಜ್, ಉಮಾ ಚಂದ್ರಶೇಖರ್, ಗಾಯತ್ರಿ ಚಿದಾನಂದ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ: ಉದ್ಯಮಿ ಸೇಸಪ್ಪ ಕೋಟ್ಯಾನ್ ಕಣ್ಣಿನ ಉಚಿತ ತಪಾಸಣ ಶಿಬಿರ ಉದ್ಘಾಟಿಸಿದರು. ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಮೊದಲಾದವರು ಉಪಸ್ಥಿತರಿದ್ದರು.