ಬಂಟ್ವಾಳ: ಇಲ್ಲಿನ ಕಸ್ಬಾ ಗ್ರಾಮದ ಇಜ್ಜಾ ಶಿವಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುನರ್ ನಿರ್ಮಾಣಗೊಂಡಿದ್ದು ಡಿ. 25ರಿಂದ ಡಿ. 29ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ವೇ.ಮೂ. ಶ್ರೀ ವಿದ್ಯಾಶಂಕರ ಭಟ್ ಬೋಳೂರು ಇವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸತ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಡಿ. 25ರಂದು ಸಂಜೆ 4 ಗಂಟೆಗೆ ಅಗ್ರಾರ್ ಜಂಕ್ಷನ್ನಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಯ ಶೋಭಾಯಾತ್ರೆಯು ನಡೆಯಲಿದ್ದು ದರ್ಭೆ ಶ್ರೀ ಬಾಲಕೃಷ್ಣ ಭಜನಾ ಮಂದಿರದ ಮಾರ್ಗ ವಾಗಿ ಶಿವ ಕ್ಷೇತ್ರ ತಲುಪಲಿದೆ. ಡಿ.28 ರಂದು ಸೋಮವಾರ ಬೆಳಿಗ್ಗೆ 10:00 ಗಂಟೆಯ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಬಿಂಬ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಉತ್ಸವದ ದಿನಗಳಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಜನಾ ಸಂಕಿರ್ತನೆ ನಡೆಯಲಿದೆ.