ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಉತ್ಸವ ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವೈದಿಕ ಕಾರ್ಯಕ್ರಮಗಳೊಂದಿಗೆ ಡಿ.19 ಮತ್ತು ಡಿ. 20 ರಂದು ನಡೆಯಲಿದೆ.
ಡಿ.೧೯ ಶನಿವಾರದಂದು ಪುಣ್ಯಾಹ, ಪಂಚಗವ್ಯ, ಗಣಹೋಮ, ಫಲಪಂಚಾಮೃತ ಅಭಿಷೇಕ, ಶ್ರೀ ಪವಮಾನ ಸೂಕ್ತ ಅಭಿಷೇಕ, ನಾಗತಂಬಿಲ, ಮಹಾಮಂಗಳಾರತಿ, ಅನ್ನಸಂತರ್ಪಣೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಕಾರ್ತಿಕ ಪೂಜೆ ರಂಗಪೂಜೆ, ಪ್ರಸನ್ನ ಪೂಜೆ ಕಲ್ಪೋಕ್ತ ಪೂಜೆ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಬಂಗಾರದ ಬಾಲೆ ತುಳು ಯಕ್ಷಗಾನ ಬಯಲಾಟ ಜರಗಲಿದೆ. ಡಿ.20 ಆದಿತ್ಯವಾರ ಗಣಪತಿ ಹೋಮ, ಬಿಂಬ ಶುದ್ಧಿ, ಸಾನಿಧ್ಯ ಕಲಶಪೂಜೆ, ಕಲಶಾಭಿಷೇP, ಫಲಪಂಚಾಮೃತ ಅಭಿಷೇಕ, ನಾಗತಂಬಿಲ, ಆಶ್ಲೇಷ ಬಲಿ ಹೋಮ, ಆಶ್ಲೇಷ ಬಲಿ ಪೂಜೆ, ಅನ್ನಸಂತರ್ಪಣೆ ವಿವಿಧ ಭಜನಾ ತಂಡಗಳಿಂದ ನಾಮ ಸಂಕೀರ್ತನೆ ನಡೆಯಲಿದೆ. ಇದೇ ಸಂದರ್ಭ ಬ್ರಹ್ಮಶ್ರೀ ನೀಲೇಶ್ವರ ಕೆ. ಯು. ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ. ಸುಬ್ರಹ್ಮಣ್ಯ ಭಟ್ ಅವರಿಗೆ ದೇವಾಲಯದ ವತಿಯಿಂದ ಸನ್ಮಾನ ಕಾರ್ಯಕ್ರಮ, ಬಳಿಕ ಶ್ರೀ ದೇವರಿಗೆ ಕಾರ್ತಿಕ ಪೂಜೆ, ರಂಗಪೂಜೆ ದೇವರ ಬಲಿ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ.