ಬಂಟ್ವಾಳ: ಹಿಂದು ಯುವ ಸೇನೆ ಬಂಟ್ವಾಳ ತಾಲೂಕು ಘಟಕ ಇದರ ವಾರ್ಷಿಕ ಮಹಾಸಭೆಯು ಭಾನುವಾರ ಶ್ರೀ ವೈದ್ಯನಾಥ ದೈವಸ್ಥಾನ ಬಂಟ್ವಾಳ ಇದರ ವಠಾರದಲ್ಲಿ ಜರಗಿತು. ಸಭೆಯಲ್ಲಿ ತಾಲೂಕು ಘಟಕದ ನೂತನ ಸಮಿತಿಯನ್ನು ಪುನರಚಿಸಲಾಯಿತು ಸಮಿತಿಯ ಅಧ್ಯಕ್ಷರಾಗಿ ಪುಷ್ಪರಾಜ್ ಜಕ್ರಿಬೆಟ್ಟು, ಗೌರವಾಧ್ಯಕ್ಷರಾಗಿ ಶಿವರಾಮ್ ಶೆಟ್ಟಿ ಜಕ್ರಿಬೆಟ್ಟು ಕಾರ್ಯದರ್ಶಿಯಾಗಿ ವಸಂತ್ ಕುಮಾರ್ ವಿ. ಮಣಿಹಳ್ಳ, ಗೌರವ ಸಲಹೆಗಾರರಾಗಿ ಪದ್ಮನಾಭ ಯು. ಎಸ್. ನಾವೂರು, ರಾಮಚಂದ್ರ ಗೌಡ ಮಣಿ, ಜಯರಾಜ ರಾಮನಗರ, ಸುಂದರ ಪೂಜಾರಿ ಮಜಲೋಡಿ ಮತ್ತು ಸಮಿತಿಯ ಇತರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸರ್ವಾನುಮತದಿಂದ ಆರಿಸಲಾಯಿತು. ವಸಂತ ಕುಮಾರ್ ವಿ. ಸ್ವಾಗತಿಸಿದರು.
ಶಿವಪ್ರಸಾದ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.