ಬಂಟ್ವಾಳ: ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಬಂಟ್ವಾಳ ಇದರ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಹಿರಿಯ ನ್ಯಾಯವಾದಿ ನಂದ ಕಿಶೋರ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರು ಸಂವಿಧಾನದ ಆಶಯದ ಬಗ್ಗೆ ಮಾಹಿತಿ ನೀಡಿದರು. ಎಬಿಎಪಿ ಜಿಲ್ಲಾ ಜತೆಕಾರ್ಯದರ್ಶಿ ಅರುಣ್ ರೋಶನ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಬಿಎಪಿ ಬಂಟ್ವಾಳ ಘಟಕದ ಗೌರವಾಧ್ಯಕ್ಷ ರಾಜರಾಮ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಉಪಾಧ್ಯಕ್ಷರಾದ ಉಮಾ ಎನ್. ಸೋಮಯಾಜಿ, ಗಿರೀಶ್ ಮುಳಿಯಾಳ, ಸಂತೋಷ್ ಜೀವನ್ ಲೋಬೋ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ. ಸಿದ್ದಕಟ್ಟೆ, ಜತೆಕಾರ್ಯದರ್ಶಿ ಶುಭಾಲತಾ, ಖಜಾಂಚಿ ಪ್ರಶಾಂತ್ ಉಪಸ್ಥಿತರಿದ್ದರು.