ಬಂಟ್ವಾಳ: ಇಲ್ಲಿನ ಕಸ್ಬ ಗ್ರಾಮದ ಅಗ್ರಾರ್ ಇಜ್ಜ ಶಿವಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಡಿ. 25 ಶುಕ್ರವಾರದಿಂದ ಡಿ.29 ಮಂಗಳವಾರದವರೆಗೆ ನಡೆಯಲಿದ್ದು ಭಾನುವಾರ ಶ್ರೀ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಸತ್ಯನಾರಾಯಣ ಭಟ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಮಿತಿ ಪ್ರಮುಖರಾದ ಅಶೋಕ್, ನಾಗೇಶ್ ಸಾಲ್ಯಾನ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.