ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರ ಪುರುಷರಾದ ಕೋಟಿ ಚೆನ್ನಯ ರ ಹೆಸರಿಡುವ ಕುರಿತಾಗಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿಗಳಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಂದೇಶ ಪತ್ರದೊಂದಿಗೆ, ಕಂಕನಾಡಿ ಗರೋಡಿಯ ಅಧ್ಯಕ್ಷ ಚಿತ್ತರಂಜನ್ ರವರ ನೇತೃತ್ವದಲ್ಲಿ ಸಭೆ ನಡೆಯಿತು . ಸಭೆಯಲ್ಲಿ ಕೈಗೊಂಡದ ತೀರ್ಮಾನದ ಮನವಿಯನ್ನು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಸಂಸದರು ಕಾನೂನಾತ್ಮಕವಾಗಿ ನೋಡಿಕೊಂಡು ಆಡಳಿತ ವ್ಯವಸ್ಥೆಯಲ್ಲಿ ಆಗುವಂತಹ ಎಲ್ಲಾ ಸಹಕಾರಗಳನ್ನು ನೀಡಲು ಬದ್ದನಾಗಿರುತ್ತೇನೆಂದು ತಿಳಿಸಿದರು . ಸಭೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್,ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನಗರ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪಕೋಟ್ಯಾನ್, ಬಿರುವೆರ್ ಕುಡ್ಲ ಇದರ ಅಧ್ಯಕ್ಷ ಉದಯ ಪೂಜಾರಿ ,ಕನ್ಯಾಡಿ ಶ್ರೀರಾಮಕ್ಷೇತ್ರ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಆರ್. ಸಿ. ನಾರಾಯಣ, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯಶ್ರೀ ಕರ್ಕೇರ , ಕಾರ್ಪೊರೇಟರ್ ಗಳಾದ ಕಿರಣ್ ಕುಮಾರ್ ಮತ್ತು ಸಂದೀಪ್ ,ಉದ್ಯಮಿಗಳಾದ ಜಗದೀಪ್ ಸುವರ್ಣ, ಸಂಪತ್ ಸುವರ್ಣ ಬೆಳ್ತಂಗಡಿ , ಆತ್ಮಶಕ್ತಿ ಬ್ಯಾಂಕಿನ ಅಧ್ಯಕ್ಷ ಚಿತ್ತರಂಜನ್ ಬೋಳಾರ , ಭುವನೇಶ್ ಪಚ್ಚಿನಡ್ಕ ,ಪುರುಷ ಸಾಲ್ಯಾನ್ ನೆತ್ತರಕೆರೆ, ಸೋಮಪ್ಪ ಕೋಟ್ಯಾನ್ ತುಂಬೆ , ವಸಂತ ಜೆ. ಪೂಜಾರಿ ,ಗಣೇಶ್ ಸುವರ್ಣ ತುಂಬೆ ,ಈಶ್ವರ್ ಕಟೀಲ್ ,ನಾರಾಯಣ ಪೂಜಾರಿ ಬೊಳ್ಳು ಕಲ್ಲು , ಮನೋಜ್ ಸರಿಪಳ್ಳ , ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು .