ಬಂಟ್ವಾಳ: ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ ಪ್ರಾಂತ್ಯ 2 ಇದರ ಪ್ರಾಂತೀಯ ಸಮ್ಮೇಳನ ಪುನರ್ಜನ್ಮದ ಸವಿನೆನಪಿಗಾಗಿ ಬಂಟ್ವಾಳದ ಸರಕಾರಿ ಸಮುದಾಯ ಆಸ್ಪತ್ರೆಗೆ ಶಾಶ್ವತ ಯೋಜನೆಯಾಗಿ ಶೈತ್ಯಗಾರದ ಸಮರ್ಪಣಾ ಕಾರ್ಯಕ್ರಮ ನ.29ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಬಂಟ್ವಾಳದ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಪ್ರಾಂತ್ಯ 2 ರ ಪ್ರಾಂತೀಯ ಅಧ್ಯಕ್ಷ ಸಂಜೀವ ಬಿ. ಶೆಟ್ಟಿ ಹೇಳಿದರು.
ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ ಬಳಿಕ 3.30ಕ್ಕೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು, ಲಯನ್ಸ್ ಜಿಲ್ಲೆ 317 ಡಿ ಯ ಜಿಲ್ಲಾ ಗವರ್ನರ್ ಡಾ. ಗೀತಪ್ರಕಾಶ್ ಉದ್ಘಾಟಿಸುವರು, ಬಂಟ್ವಾಳ ಶಾಸಕ ರಾಜೇಶ್ ನಾಕ್ ದೀಪ ಪ್ರಜ್ವಲಿಸುವರು, ಪ್ರಾಂತೀಯ ಅಧ್ಯಕ್ಷ ಸಂಜೀವ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಹರಿಕೃಷ್ಣ ಪುನರೂರು, ತಹಶೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಭಾಗವಹಿಸುವರು, ಲಯನ್ಸ್ ಪ್ರಥಮ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ದ್ವಿತೀಯ ಉಪರಾಜ್ಯಪಾಲ ಎಸ್. ಸಂಜಿತ್ ಶೆಟ್ಟಿ, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಎಂ. ಕೃಷ್ಣಶ್ಯಾಂ ಗೌರವ ಉಪಸ್ಥಿತರಿರುವರು ಎಂದು ತಿಳಿಸಿದರು.
ಬಂಟ್ವಾಳದ ಜನತೆ ಹಾಗೂ ಆಸ್ಪತ್ರೆಯ ಅಗತ್ಯತೆಯ ಹಿನ್ನಲೆಯಲ್ಲಿ ಸುಮಾರು 6.5 ಲಕ್ಷ ರೂಪಾಯಿ ವೆಚ್ಚದ 4 ಶೈತ್ಯಗಾರವನ್ನು ನೀಡಲು ಉದ್ದೇಶಿಸಲಾಗಿದ್ದು ಮೊದಲ ಹಂತದಲ್ಲಿ 2 ಶೈತ್ಯಗಾರವನ್ನು ಆಸ್ಪತ್ರೆಗೆ ನೀಡಲಾಗುವುದು, ಫೆಬ್ರವರಿ 14ರಂದು ನಡೆಯುವ ಪ್ರಾಂತೀಯ ಸಮ್ಮೆಳನದ ಸಂದರ್ಭ ಇನ್ನೆರಡು ಶೈತ್ಯಗಾರವನ್ನು ನೀಡುವುದಾಗಿ ಅವರು ತಿಳಿಸಿದರು. ಎರಡು ಬಾರಿ ನಡೆದ ರಸ್ತೆ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಬದುಕುಳಿದಿದ್ದು ನನ್ನ ಬದುಕಿನ ಪುನರ್ಜನ್ಮವಾಗಿದೆ. ಈ ಕಾರಣಕ್ಕಾಗಿ ಪ್ರಾಂತೀಯ ಸಮ್ಮೆಳನಕ್ಕೆ ಪುನರ್ಜನ್ಮ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ವಲಯಾಧ್ಯಕ್ಷ ಮನೋರಂಜನ್ ಕೆ.ಆರ್., ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಎನ್.ಸತೀಶ್ ಕುಡ್ವ, ಕಾರ್ಯದರ್ಶಿ ಮದ್ವರಾಜ್ ಕಲ್ಮಾಡಿ, ಕೋಶಾಧಿಕಾರಿ ಸುನೀಲ್ ಬಿ., ಶಾಶ್ವತ ಯೋಜನೆಯ ಸಂಯೋಜಕ ಉಮೇಶ್ ಆಚಾರ್, ಕಾರ್ಯಕ್ರಮ ಸಂಯೋಜಕ ಬಿ.ಶಿವಾನಂದ ಬಾಳಿಗಾ, ಜಯಂತ್ ಶೆಟ್ಟಿ ಉಪಸ್ಥಿತರಿದ್ದರು.