ಬಂಟ್ವಾಳ: ಸಜಿಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ಲಕ್ಷ್ಮಣ್ ಕುಲಾಲ್ ಅವರ ಧರ್ಮಪತ್ನಿ ಲಲಿತಾ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸಾ ವೆಚ್ಚವಾಗಿ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.
ಈ ಸಂದರ್ಭ ಕುಲಾಲ ಯುವವೇದಿಕೆ ಅಧ್ಯಕ್ಷ ಸತೀಶ್ ಜಕ್ರಿಬೆಟ್ಟು, ಗೌರವಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಉಪಾಧ್ಯಕ್ಷ ಸಂತೋಷ್ ಮರ್ತಾಜೆ, ಕಾರ್ಯದರ್ಶಿ ಪುರುಷೋತ್ತಮ , ಸೀತಾರಾಮ್ ಶೆಟ್ಟಿ ಕಾಂತಾಡಿಗುತ್ತು, ಗೌರವ ಸಲಹೆಗಾರರಾದ ನಾರಯಣ. ಸಿ. ಪೆರ್ನೆ, ಎನ್ನಾರ್ .ಕೆ.ವಿಶ್ವನಾಥ್ ಹಾಗೂ ಹರೀಶ್ ಮಿತ್ತಕಟ್ಟ ಉಪಸ್ಥಿತರಿದ್ದರು.