ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಬಾಳಿಕೆ ಎಂಬಲ್ಲಿ 10 ಲಕ್ಷ ರೂ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಘಟನಾ ಕಾರ್ಯಕ್ರಮವು ನೆರವೇರಿತು.
ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ನ ನೀರು ಸರಬರಾಜು ನೌಕರ ಸೋಮಯ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ತಾಲೂಕು ಪಂಚಾಯತ್ ಸದಸ್ಯ ಯಶವಂತ್ ಪೊಳಲಿ , ಬಡಗಬೆಳ್ಳೂರು ಸಹಕಾರಿ ಬ್ಯಾಂಕ್ ಅಧ್ಯಕ್ಷ ನಂದರಾಮ್ ರೈ ಮತ್ತು ಬಿಜೆಪಿ ಪ್ರಮುಖರಾದ ಪ್ರಕಾಶ್ ಬೆಳ್ಳೂರು, ರಮೇಶ್ ಬಟ್ಟಾಜೆ,ಮೋಹನ್ ದಾಸ್ ಕೊಟ್ಟಾರಿ, ಕಾರ್ತಿಕ್ ಬಲ್ಲಾಳ್ , ಸುಧೀರ್ ತಾರಿಗುಡ್ಡೆ, ಅಶ್ವಥ್ ರಾವ್ ಬಾಳಿಕೆ, ನಿತೇಶ್ ಅಂಚನ್ ಹಾಗೂ ಕಾರ್ಯಕರ್ತರು ಪಾಲ್ಗೊಂಡರು.