ಬಂಟ್ವಾಳ: ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ (ಬಿ.ಯಂ.ಎಸ್) ಬಿ.ಸಿ.ರೋಡು ಇದರ
32ನೇ ವಾರ್ಷಿಕ ಮಹಾಸಭೆಯು ಶನಿವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಚಿಂತನೆಯ ಮೂಲಕ ಸಮಾಜದ ಕೈಕಂರ್ಯದಲ್ಲಿ ತೊಡಗಿರುವ ಸಂಘಟನೆಯ ಉದ್ದೇಶ ನಿಜಕ್ಕೂ ಶ್ಲಾಘನೀಯ, ಜೀವನ ನಿರ್ವಹಣೆಗಾಗಿ ರಿಕ್ಷಾ ವೃತ್ತಿಯನ್ನು ಅವಲಂಬಿಸಿಕೊಂಡಿರುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆ ಎಂಬ ಭಾವನೆಯಿಂದ ರಿಕ್ಷಾ ಚಾಲಕರು ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಕಳೆದ ೩೨ ವರ್ಷಗಳಿಂದ ದೇಶದ ಹಿತಚಿಂತನೆಯ ದೂರದೃಷ್ಟಿಯೊಂದಿಗೆ ಸಂಘಟನೆಯನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರುವುದು ಮಾದರಿ ಕಾರ್ಯ ಎಂದು ಹೇಳಿದ ಅವರು ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ರಿಕ್ಷಾ ಚಾಲಕರ ಸಹಕಾರ ಕೂಡ ಅಗತ್ಯವಿದ್ದು ಕಾನೂನಿನ ಚೌಕಟ್ಟಿನ ಇತಿಮಿತಿಗಳನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದರು.
ಬಿ.ಯಂ.ಎಸ್.ನ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ
ಕಾನೂನಿಗೆ ತೊಡಕಾಗದ ರೀತಿಯಲ್ಲಿ ಶಿಸ್ತುಬದ್ಧವಾದ ನಡವಳಿಕೆ ಸಮಾಜದಲ್ಲಿ ಗುರುತಿಸಲ್ಪಡುವ ಹಾಗೂ ಗಮನಾರ್ಹ ಸಂಗತಿಯಾಗಿದೆ, ರಿಕ್ಷಾ ಚಾಲಕರ ಮಂಡಳಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು. ಸಂಘದ ಕಾನೂನು ಸಲಹೆಗಾರ
ನ್ಯಾಯವಾದಿ ಜಯರಾಮ ರೈ ಮಾತನಾಡಿ ರಿಕ್ಷಾ ಚಾಲಕ ಮಾಲಕರ ಸಂಘಟನೆ ಸತ್ಯದ ಧ್ಯೋತಕವಾಗಿದೆ ಸಂಘಟನೆಯಲ್ಲಿರುವ ಸದಸ್ಯರಿಗೆ ಶಕ್ತಿ ಜಾಸ್ತಿ, ಸಂಘಟನೆಯ ಮೂಲಕ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಸಂಘದ ಗೌರವಾಧ್ಯಕ್ಷ ಗೋವಿಂದ ಪ್ರಭು ಮಾತನಾಡಿ ರಿಕ್ಷಾ ಚಾಲಕ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಸಮಾಜ ಸೇವೆ ಮಾಡಿದ ಹೆಗ್ಗಳಿಕೆ ರಿಕ್ಷಾ ಚಾಲಕರಿಗೆ ಇದೆ ಎಂದರು.
ಜಿಲ್ಲಾ ಉಪಾಧಗ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಸಂಘದ ಅಧ್ಯಕ್ಷ ಸತೀಶ್ ಭಂಡಾರಿಬೆಟ್ಟು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಅಡ್ಯನಡ್ಕ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ಹಾಗೂ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ “ಶ್ರಮ ಸನ್ಮಾನ ” ಪುರಸ್ಕೃತರಾದ ತಾಲೂಕಿನ ೪ ಮಂದಿ ರಿಕ್ಷಾ ಚಾಲಕರನ್ನು ಅಭಿನಂದಿಸಲಾಯಿತು. ಸದಸ್ಯರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಸಂಘದ ಗೌರವ ಸಲಹೆಗಾರ ಸದಾನಂದ ಗೌಡ ನಾವೂರ ಸ್ವಾಗತಿಸಿ, ಸಂಘದ ಮಾಜಿ ಕಾರ್ಯದರ್ಶಿ ನಾರಾಯಣ ಶಂಭೂರು ವಂದಿಸಿದರು. ಸಂಘದ ಜೊತೆ ಕಾರ್ಯದರ್ಶಿ ಉಮಾಶಂಕರ್ ದಡ್ಡಲಕಾಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೃಷ್ಣ ಗೌಡ ಮಣಿಹಳ್ಳ ಲೆಕ್ಕಪತ್ರ ಮಂಡನೆ ಮಾಡಿದರು.