ಬಂಟ್ವಾಳ: ತಾಲೂಕಿನ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಇರ್ವತ್ತೂರು ಮತ್ತು ಮೂಡುಪಡುಕೋಡಿ ಗ್ರಾಮದಲ್ಲಿ 1.74 ಕೋ. ರೂ.ಗೂ ಮಿಕ್ಕಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹೇಳಿದರು.ಗುರುವಾರ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪೂರ್ಣಗೊಂಡ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ರಸ್ತೆಗಳನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ ಕಾಂಕ್ರೀಟೀಕರಣಗೊಳಿಸಲಾಗುತ್ತಿದ್ದು, ಬಾಕಿ ಕಾಮಗಾರಿಗಳನ್ನು ಶೀಘ್ರದಲ್ಲಿ ಇನ್ನಷ್ಟು ಅನುದಾನ ಒದಗಿಸಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಶಿಲಾನ್ಯಾಸ: 10 ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ನೆಕ್ಕಿತರಾವು-ಬರಮೇಲು ಕಾಂಕ್ರಿಟ್ ರಸ್ತೆ ಕಾಮಗಾರಿ, 5 ಲಕ್ಷ ರೂ. ವೆಚ್ಚದ ಪೂರ್ಲಿ ರಸ್ತೆ, 10ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಪಂಜೋಡಿ-ಅರ್ಕೆದೊಟ್ಟು ರಸ್ತೆ, 6ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಕಲಾಬಾಗಿಲು-ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
5ಲ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮೂಡುಪಡುಕೋಡಿ ಗ್ರಾಮದ ಕುಕ್ಕೆರೋಡಿ-ಶ್ರೀ ಅಗ್ನಿದುರ್ಗೆ ದೇವಸ್ಥಾನ ಕಾಂಕ್ರೀಟ್ ರಸ್ತೆ, 20ಲ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮುಂಡಬಲು-ಕಾಡಬೆಟ್ಟು ಕಾಂಕ್ರೀಟ್ ರಸ್ತೆ, 4 ಲ.ರೂ ವೆಚ್ಚದಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಕುತ್ತಿಲ-ಮಲ್ಲೇರಿ ಕಾಂಕ್ರೀಟ್ ರಸ್ತೆ, 15 ಲಕ್ಷ ರೂ. ವೆಚ್ಚದ ಇರ್ವತ್ತೂರು ಗ್ರಾಮದ ಪಂಜೋಡಿ- ಮಣ್ಣೂರು ದೇವಸ್ಥಾನ ಕಾಂಕ್ರೀಟ್ ರಸ್ತೆ, ೨೫ ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಗುಂಪಕಲ್ಲು-ಸೇವಾ ಕಾಂಕ್ರೀಟ್ ರಸ್ತೆ,15 ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಸೇವಾ-ಕಜೆಕೋಡಿ ಕಾಂಕ್ರೀಟ್ ರಸ್ತೆ,15 ಲಕ್ಷ ರೂ. ವೆಚ್ಚದ ಇರ್ವತ್ತೂರು ಗ್ರಾಮದ ಮೇಲ್ಪತ್ತರ-ಪೆತ್ತರ ಕಾಂಕ್ರೀಟ್ ರಸ್ತೆ, 10 ಲಕ್ಷ ರೂ. ವೆಚ್ಚದ ಪೊಟ್ಟುಕೆರೆ-ಪಲ್ಕೆತ್ತು ರಸ್ತೆ ಮೊದಲಾದ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ರಮೇಶ್ ಪೂಜಾರಿ ಕುಡ್ಮೇರ್, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಪ್ರಕಾಶ್, ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಶ್ರೀ ಅಗ್ನಿದುರ್ಗೆ ದೇವಸ್ಥಾನ ಧರ್ಮದರ್ಶಿ ರಾಘವ ಸುವರ್ಣ, ಪ್ರಮುಖರಾದ ಬೂಬ ಸಫಲ್ಯ,ಸುಂದರ ನಾಯ್ಕ, ,ರವಿಶಂಕರ ಹೊಳ್ಳ, ದಯಾನಂದ ಎರ್ಮೆನಾಡು, ದಯಾನಂದ ಕುಲಾಲ್, ಮಿಥುನ್ ಪ್ರಭು ಮಲ್ಯಾರ್,ಲೋಕೇಶ್ ಎರ್ಮೆನಾಡು, ಹೇಮಚಂದ್ರ ಶೆಟ್ಟಿ, ಆನಂದ ಪೂಜಾರಿ ಕುಡ್ಮೇರ್, ಶ್ರೀನಿವಾಸ ಪೂಜಾರಿ, ಹರೀಶ್ ಪೂಜಾರಿ ಎರ್ಮೆನಾಡು, ಉದಯ ಕಜೆಕೋಡಿ,ಭರತ್ ರಾಜ್ ಜೈನ್, ಅಬೂಬಕ್ಕರ್ ಅಂಕರಜಾಲ್, ಶಂಕರ ಶೆಟ್ಟಿ ಪಲ್ಕೆತ್ತು, ಜಯ ಶೆಟ್ಟಿ ನೆಕ್ಕಿತರವು, ಪ್ರಕಾಶ್ ಮಲ್ಲೇರಿ, ಹರಿಪ್ರಸಾದ್ ಅರ್ಕೆದೊಟ್ಟು, ಉಗ್ಗಪ್ಪ ಶೆಟ್ಟಿ ಸೇವಾ, ಯಕ್ಷಿತ್ ಗೌಡ, ಗ್ರಾ.ಪಂ.ಕಾರ್ಯದರ್ಶಿ ನಾರಾಯಣ ನಾಯ್ಕ್, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ ಮತ್ತಿತರರಿದ್ದರು. ಪಂ.ಅ.ಅಧಿಕಾರಿ ಅವಿನಾಶ್ ಬಿ.ಆರ್. ಸ್ವಾಗತಿಸಿ, ನಿರೂಪಿಸಿದರು.