ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಶಾಲೆಗುಡ್ಡೆ ಚಂದ್ರಹಾಸ ಶೆಟ್ಟಿಯವರ ಮನೆಯ ಮೇಲ್ಛಾವಣಿಯು ಇತ್ತೀಚೆಗೆ ಭಾರಿ ಗಾಳಿಗೆ ಹಾರಿಹೋಗಿ ಮನೆಗೆ ಹಾನಿಯಾಗಿದ್ದು ಸಂತ್ರಸ್ತರಿಗೆ ವಾಸ್ತವ್ಯಕ್ಕೆ ಬಿಜೆಪಿ ಕಾರ್ಯಕರ್ತರು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಮಯ್ಯ, ಶಾಂತಪ್ಪ ಪೂಜಾರಿ, ಧರಣೇಂದ್ರ ಜೈನ್, ಶರ್ಮಿತ್ ಜೈನ್, ದಿನೇಶ್, ಚಿದಾನಂದ ರೈ ಕಕ್ಯಪದವು, ಸುದರ್ಶನ್ ಬಜ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.