ಬಂಟ್ವಾಳ: ನೂರುದ್ದೀನ್ ಜುಮಾ ಮಸೀದಿ ಗುಡ್ಡೆಯಂಗಡಿ ಇದರ ನೂರುದ್ದೀನ್ ಮದ್ರಸಾ ಕಟ್ಟಡದ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.
ಕರ್ನಾಟಕ ಮುಶಾವರ ಜಮೀಯುಲ್ ಉಲಮಾ ಅಧ್ಯಕ್ಷ ಝೈನುಲ್ ಅಬಿದೀನ್ ತಂಙಳ್ ಉದ್ಘಾಟಿಸಿದರು. ಎಸ್ಕೆಎಸ್ಎಸ್ಎಫ್ ಬಂಟ್ವಾಳ ವಲಯದ ಅಧ್ಯಕ್ಷ ಇರ್ಶಾದ್ ದಾರಿಮಿ ದುವಾ ವಾಚಿಸಿದರು. ನೂರುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಎಸ್. ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್, ಮಸೀದಿಯ ಉಸ್ತಾದ್ ಮಹಮ್ಮದ್ ಶರೀಫ್ ಮೌಲವಿ ಪರಪ್ಪು, ಮಸೀದಿಯ ಮುಅಝ್ಝಿನ್ ಇಸ್ಮಾಯಿಲ್ ಯಮಾನಿ, ಕಟ್ಟಡ ಸಮಿತಿಯ ಅಧ್ಯಕ್ಷ ಬಿ.ಎ.ಮಹಮ್ಮದ್ ನೀಮಾ, ಪುರಸಭೆ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಮಾಜಿ ಅಧ್ಯಕ್ಷ ಫಕೀರ್ ಹಾಜಿ ಉಪಸ್ಥಿತರಿದ್ದರು. ಈ ಸಂದರ್ಬ ಮಾಜಿ ಸಚಿವ ಬಿ. ರಮನಾಥ ರೈ ಹಾಗೂ ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್ ಅವರನ್ನು ಸನ್ಮಾನಿಸಲಾಯಿತು. ಮಸೀದಿಯ ಖತೀಬರಾದ ರಶೀದ್ ಯಮಾನಿ ಸ್ವಾಗತಿಸಿದರು, ಮಾಜ ಅಧ್ಯಕ್ಷ ಉಮ್ಮರ್ ಫಾರೂಕ್ ವಂದಿಸಿದರು.