ಬಂಟ್ವಾಳ: ಹ್ಯುಮ್ಯಾನಿಟಿ ಟ್ರಸ್ಟ್ ನ ಆರ್ಥಿಕ ಸಹಕಾರ ಹಾಗೂ ದಾನಿಗಳ ನೆರವಿನೊಂದಿಗೆ ನಿರ್ಮಾಣಗೊಂಡ ಕೊಯಿಲಾ ಗ್ರಾಮದ ಮಾವಂತೂರಿನ ವಿಶಾಲಾಕ್ಷಿ ಶೆಟ್ಟಿಯವರ ಮನೆಯ ಗೃಹಪ್ರವೇಶ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಬೆಳಿಗ್ಗೆ ಗಣಹೋಮ ಸಹಿತ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಅವರು ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಹ್ಯುಮ್ಯಾನಿಟಿ ಸಂಸ್ಥಾಪಕ ರೋಷನ್ ಬೆಳ್ಮಣ್, ಟ್ರಸ್ಟಿ ಪ್ರಶಾಂತ್ ಫ್ರಾಂಕ್, ಸದಸ್ಯ ಮರ್ವಿನ್ ಡಿಸಿಲ್ವಾ, ಮಾರ್ಕ್ ಲೋಬೋ, ವೈಲೆಟ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.
ಸ್ವಂತ ಮನೆಯಿಲ್ಲದೆ ತನ್ನ ಮೂರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ವಿಶಾಲಾಕ್ಷಿ ಶೆಟ್ಟಿಯವರು ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಸರಕಾರದ ವಸತಿ ಯೋಜನೆಯಡಿ ಮನೆಗಾಗಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಸಂದರ್ಭದಲ್ಲಿ ಸ್ಥಳೀಯ ದಾನಿಗಳ ನೆರವಿಗೆ ಬಂದಿದ್ದು ಮನೆ ನಿರ್ಮಾಣ ಕೆಲಸ ಆರಂಭಿಸಿ ಲಿಂಟಲ್ ಹಂತದವರೆಗೆ ಬಂದಿತ್ತು. ಆ ಬಳಿಕದ ಕಾಮಗಾರಿ ಮುಂದುವರಿಸಲು ಆರ್ಥಿಕ ಅಡಚಣೆ ಉಂಟಾದಾಗ ಹ್ಯುಮ್ಯಾನಿಟಿ ಟ್ರಸ್ಟ್ ಗೆ ಮನವಿ ಮಾಡಲಾಗಿತ್ತು. ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿ 3ಲಕ್ಷ ರೂಪಾಯಿಯ ಆರ್ಥೀಕ ನೆರವನ್ನು ಹ್ಯುಮ್ಯಾನಿಟಿ ಟ್ರಸ್ಟ್ ನೀಡಿತು.ಸ್ಥಳೀಯ ದಾನಿಗಳು ವಯರಿಂಗ್ ಹಾಗೂ ಪೈಂಟಿಂಗ್ ಕೆಲಸವನ್ನು ಉಚಿತವಾಗಿ ಮಾಡಿಕೊಟ್ಟಿದ್ದಾರೆ. ಇದೀಗ ಮನೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು ಮನೆ ಇಲ್ಲದೆ ಪರಿತಪಿಸುತ್ತಿದ್ದ ಮನೆಯ ಯಜಮಾನಿ ವಿಶಾಲಾಕ್ಷಿಯವರ ಮುಖದಲ್ಲಿ ಸಂಭ್ರಮ ಎದ್ದುಕಾಣುತ್ತುತ್ತು.