ಬಂಟ್ವಾಳ: ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನ ಡಿಸಿಐಬಿ ಪೊಲೀಸರು ಮೆಲ್ಕಾರ್ ಬಳಿ ಪತ್ತೆ ಹಚ್ಚಿದ್ದು ಬಂಟ್ವಾಳ ನಗರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಂಗಳೂರಿನ ಟಿ.ಪಿ. ಫಾರೂಕ್ (50) ಹಾಗೂ ನೇಪಾಳ ಮೂಲದ ಸಾಗರ್ ಸಿಂಗ್ (22) ಬಂಧಿತ ಆರೋಪಿಗಳು.
ಮಾಣಿಯಿಂದ ಮೆಲ್ಕಾರ್ವರೆಗೆ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಡಿಸಿಐಬಿ ಇನ್ಸ್ಪೆಪೆಕ್ಟರ್ ಚೆಲುವರಾಜು ಮತ್ತು ತಂಡ ಮೆಲ್ಕಾರ್ ಬಳಿ ಕಾರನ್ನು ತಪಾಸಣೆ ನಡೆಸಿದಾಗ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 1.480ಕಿ.ಗ್ರಾಂ ಗಾಂಜಾ ಹಾಗೂ ಬ್ರೀಝಾ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಒಟ್ಟು ಮೊತ್ತ ರೂ. 10,32,900 ಆಗಿರುತ್ತದೆ.
ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷ ಚೆಲುವರಾಜು ಬಿ. ಅವರ ನೇತ್ರತ್ವದಲ್ಲಿ ಡಿ.ಸಿ.ಐ.ಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್ ಎಂ, ತಾರಾನಾಥ್, ಪ್ರವೀಣ್ ರೈ, ಶೋನ್ಶಾ, ಸುರೇಶ್, ತಾಂತ್ರಿಕ ವಿಭಾಗದ ಸಂಪತ್ ಮತ್ತು ದಿವಾಕರ್ ಕಾರ್ಯಚರಣೆ ನಡೆಸಿದ್ದಾರೆ.