ಬಂಟ್ವಾಳ: ಮಂಗಳೂರಿನ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಯೋಜನೆಯಡಿ ಬಡ ಫಲಾನುಭವಿಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿಗಳಿರುವ ಕಿಟ್ ವಿತರಣಾ ಕಾರ್ಯಕ್ರಮ ಬಂಟ್ವಾಳದ ಯಶವಂತ ವ್ಯಾಯಮ ಶಾಲೆಯಲ್ಲಿ ನಡೆಯಿತು.
ಇಸ್ಕಾನ್ ನ ಶ್ರೀ ಹರಿಚರಣ ದಾಸ್ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಇದು ಶ್ರೀ ಕೃಷ್ಣ ದೇವರ ಪ್ರಸಾದ. ದೇವರ ಇಚ್ಚೆಯಂತೆ ನಾವು ಈ ಕಾರ್ಯ ಮಾಡುತ್ತಿದ್ದೇವೆ ಎಂದರು. ಇಸ್ಕಾನ್ ಸಂಸ್ಥೆಯ ವತಿಯಿಂದ ದೇಶಾದ್ಯಂತ 9 ಕೋಟಿಗೂ ಅಧಿಕ ಜನರಿಗೆ ಆಹಾರ ನೀಡಿದ್ದೇವೆ. ಮಂಗಳೂರು ಸುತ್ತಮುತ್ತ ಹನ್ನೊಂದು ಸಾವಿರಕ್ಕಿಂತಲೂ ಅಧಿಕ ಜನರಿಗೆ ಕಿಟ್ ವಿತರಿಸಿದ್ದೇವೆ ಹಾಗೂ 50 ಸಾವಿರಕ್ಕಿಂತ ಅಧಿಕ ಬಿಸಿಯೂಟ ನೀಡಿದ್ದೇವೆ ಎಂದರು.
ಈ ಸಂದರ್ಭ ಯಶವಂತ ವ್ಯಾಯಮ ಶಾಲೆಯ ಅಧ್ಯಕ್ಷ ಬಿ.ನಾರಾಯಣ ಕಾಮತ್, ಜಿಎಸ್ ಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಮಲ್ಯ, ಕಾರ್ಯದರ್ಶಿ ಶಿವಾನಂದ ಬಾಳಿಗ ಪ್ರಮುಖರಾದ ಶ್ರೀನಿವಾಸ ಪೈ, ಸತೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಬಡ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು