ಬಂಟ್ವಾಳ: ಪತ್ರಕರ್ತ ಸೂರ್ಯ ನಾರಾಯಣ ಪೂವಳ ಅವರ ನಿಧನದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿಯವರ ಅಧ್ಯಕ್ಷತೆಯಲ್ಲಿ ಶೃದ್ದಾಂಜಲಿ ಸಭೆ ನಡೆಯಿತು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋ.ತುಕಾರಾಂ ಪೂಜಾರಿ, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಹಿರಿಯ ಪತ್ರಕರ್ತರಾದ ಜಯಾನಂದ ಪೆರಾಜೆ, ರಾಜಾ ಬಂಟ್ವಾಳ, ಸಂದೀಪ್ ಸಾಲಿಯಾನ್, ಮೌನೇಶ್ ವಿಶ್ವಕರ್ಮ ಅವರು ಪೂವಳರೊಂದಿಗಿನ ಓಡನಾಟ, ಅವರ ಸಾಮಾಜಿಕ ಕಳಕಳಿಯ ಬಗ್ಗೆ ಗುಣಗಾನ ಮಾಡಿದರು.
ಎರಡು ನಿಮಿಷಗಳ ಮೌನಪ್ರಾರ್ಥನೆಯೊಂದಿಗೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪತ್ರಕರ್ತರಾದ ವೆಂಕಟೇಶ್ ಬಂಟ್ವಾಳ, ಇಮ್ತಿಯಾಜ್, ರತ್ನದೇವ್ ಪುಂಜಾಲಕಟ್ಟೆ, ಯಾದವ ಅಗ್ರಬೈಲ್, ನ್ಯಾಯವಾದಿ ರಾಘವೇಂದ್ರ ಬನ್ನಿಂತಾಯ ಬಿ.ಸಿ.ರೋಡ್ ಮೊದಲಾದವರಿದ್ದರು.