ಬಂಟ್ವಾಳ: ಹ್ಯುಮ್ಯಾನಿಟಿ ಕ್ಲಬ್ ಬಂಟ್ವಾಳ ಇದರ ನೇತೃತ್ವದಲ್ಲಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಹಾಗೂ ಪುರಸಭೆ ಬಂಟ್ವಾಳ ಇದರ ಸಹಕಾರದೊಂದಿಗೆ ಸಂಚಾರಿ ಕೋವಿಡ್ ಯುನಿಟ್ ಮೂಲಕ ಶನಿವಾರ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಯಿತು.
ಜಕ್ರಿಬೆಟ್ಟುವಿನ ಮಿನೇಜಸ್ ವುಡ್ ಇಂಡಸ್ಟ್ರೀಸ್, ಬಂಟ್ವಾಳ ಬೈಪಾಸ್ ನ ಕಾರ್ ಕೇರ್ ಸೆಂಟರ್ ಹಾಗೂ ಬಾಲಾಜಿ ಸರ್ವಿಸ್ ಸ್ಟೇಷನ್ ನ ಕಾರ್ಮಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಸೇರಿದಂತೆ ಒಟ್ಟು 71 ಮಂದಿ ಕೋವಿಡ್ ತಪಾಸಣೆ ಮಾಡಿದರು. ಹ್ಯುಮ್ಯಾನಿಟಿ ಟ್ರಸ್ಟಿ ಪ್ರಶಾಂತ್ ಫ್ರಾಂಕ್, ಕ್ಲಬ್ ಸದಸ್ಯ ಸಂದೀಪ್ ಸಾಲ್ಯಾನ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷನ್ ಗಳಾದ ಫರ್ನಾಝ್, ಶುಭಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ವಸಂತಿ ಚಂದಪ್ಪ, ಜೆಸಿಂತಾ ಸಹರಿಸಿದರು. ಮಿನೇಜಸ್ ವುಡ್ ಇಂಡಸ್ಟ್ರೀಸ್ ನ ಎಲ್ಸನ್ ಮಿನೇಜಸ್, ಕಾರ್ ಕೇರ್ ಸೆಂಟರ್ ನ ಸತೀಶ್ ಶೆಟ್ಟಿ , ಬಾಲಾಜಿ ಸರ್ವಿಸ್ ಸ್ಟೇಷನ್ ನ ಪ್ರಶಾಂತ್ ಭಂಡಾರ್ ಕಾರ್ ಉಪಸ್ಥಿತರಿದ್ದರು.