ಬಂಟ್ವಾಳ: ಸೂರತ್ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿಯವರು ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದರು. ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಭಾರತ ಶಿಕ್ಷಣ ಯಾತ್ರೆ ಸೂರತ್ ತಲುಪಿದ್ದಾಗ ವಿಶೇಷ ಸ್ವಾಗತ ಕೋರಿದ್ದ ವಿಶ್ವನಾಥ ಪೂಜಾರಿ ಮತ್ತವರ ತಂಡ ಅ ಸಂದರ್ಭ ದಡ್ಡಲಕಾಡು ಸರಕಾರಿ ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದರು. ಅದರಂತೆ ಅವರ ಪತ್ನಿ ಅಮಿತ ವಿಶ್ವನಾಥ ಪೂಜಾರಿ ಹಾಗೂ ಸೀಮಾ ಪ್ರಭಾಕರ ಸಾಲ್ಯಾನ್ ಅವರ ಜೊತೆಗೂಡಿ ಶಾಲೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ ಉಪಸ್ಥಿತರಿದ್ದರು.