ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ
ಓಂಕಾರೇಶ್ವರೀ ದೇವಿ ಭಜನಾ ಮಂದಿರದಲ್ಲಿ ನವರಾತ್ರಿಯ ಕೊನೆಯ ದಿನವಾದ ಭಾನುವಾರ ಶ್ರೀದೇವರಿಗೆ ವಿಶೇಷ ಪೂಜೆ ನಡೆಯಿತು. ಶರನ್ನವರಾತ್ರಿಯ ಪ್ರಯುಕ್ತ ಶ್ರೀ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಈ ಸಂದರ್ಭ ಓಂಕಾರೇಶ್ವರಿ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು. ಮಂದಿರದ ಸ್ಥಾಪಕಾಧ್ಯಕ್ಷ ವಿಠಲ ಬಂಗೇರ, ಗೌರವಾಧ್ಯಕ್ಷ ತಿಮ್ಮಪ್ಪ ಆಚಾರ್ಯ, ಅರ್ಚಕ ಹೊನ್ನಪ್ಪ ಪೂಜಾರಿ, ಓಂಕಾರೇಶ್ವರಿ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.