ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಗ್ಯಾಸ್ ಏಜೆನ್ಸಿ ಮೂಲಕ ಮನೆಮಾತಾಗಿರುವ ಭದ್ರಾ ಗ್ರೂಪ್ಸ್ ನವರ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಭದ್ರಾ ಹೋಮ್ ಅಪ್ಲೈಯನ್ಸಸ್ ನೂತನ ಮಳಿಗೆ ರವಿವಾರ ಬಂಟ್ವಾಳ ಬಸ್ತಿಪಡ್ಪುನಲ್ಲಿ ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಎಸ್ಸಿಡಿಸಿಸಿ ಬ್ಯಾಂಕಿನ ನಿವೃತ್ತ ಆಡಳಿತ ನಿರ್ದೇಶಕ ನಾರಾಯಣ ಕಾಮತ್ ಉದ್ಘಾಟಿಸಿದರು. ಅವರು ಮಾತನಾಡಿ, ಬೆಳೆಯುತ್ತಿರುವ ಬಂಟ್ವಾಳ ನಗರಕ್ಕೆ ಭದ್ರಾ ಅಪ್ಲೈಯನ್ಸಸ್ ಉತ್ತಮ ಕೊಡುಗೆಯಾಗಲಿದೆ. 35 ವರ್ಷಗಳ ಹಿಂದೆ ಗ್ಯಾಸ್ ಸಂಪರ್ಕ ನೀಡಿ ಅಡುಗೆ ಅನಿಲ ಸೇವೆಗೆ ಭದ್ರಬುನಾದಿ ಹಾಕಿದ್ದರು ಎಂದರು. ಸ್ಪರ್ಧೆಯಲ್ಲಿ ಜಯಿಸಿ ವಿಜಯಶಾಲಿಯಾಗಲು ಪ್ರಯತ್ನ ಹಾಗೂ ದೇವರ ದಯೆ ಬೇಕು ಅಂತಹ ಸಾಧನೆಯನ್ನು ಭದ್ರ ಸಂಸ್ಥೆ ಮಾಡಿಕೊಂಡು ಬಂದಿದೆ.
ಕನಸು ಇದ್ದಾಗ ಮಾತ್ರ ಅದನ್ನು ನನಸು ಗೊಳಿಸುವ ಪ್ರಯತ್ನ ಇರುತ್ತದೆ. ಕರ್ತವ್ಯ, ಶಿಸ್ತು, ಸಮರ್ಪಣ ಮನೋಭಾವನೆ ಹಾಗೂ ಶ್ರದ್ದೆ ಇದ್ದಾಗ ಉನ್ನತ ಸಾಧನೆ ಮಾಡಲು ಸಾಧ್ಯ ವಿದೆ. ಈ ಸಂಸ್ಥೆ ಇನ್ನಷ್ಟು ಜನಮನ್ನಣೆ ಪಡೆಯಲಿ ಎಂದು ಶುಭ ಹಾರೈಸಿದರು.
ಪ್ರಸ್ತಾವನೆಗೈದ ಮೇಘಾ ಆಚಾರ್ಯ ಅವರು, ಗೃಹಿಣಿಯರ ಸಂಗಾತಿಯಾಗಿ ರೂಪುಗೊಂಡಿರುವ ಭದ್ರಾ ಅಪ್ಲೈಯನ್ಸಸ್ ಬೆಳೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಂಸ್ಥೆಯ ಪ್ರವರ್ತಕರ ಮಾತ ಪಿತರಾದ ವರದ ಆಚಾರ್ಯ, ಆಶಾಲತಾ ಬಾಯಿ ದಂಪತ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಹೆಗ್ಡೆ, ಪ್ರಮುಖರಾದ ನಾರಾಯಣ ಪೈ, ಮುಕ್ತಾ ಪೈ, ನ್ಯಾಯವಾದಿ ಅಶ್ವನಿಕುಮಾರ್ ರೈ, ವಿದ್ಯಾ ರೈ, ಸಂಜೀವ ಪೂಜಾರಿ, ಬಸ್ತಿ ಮಾಧವ ಶೆಣೈ, ಬೇಬಿ ಕುಂದರ್, ಡಾ.ಅಶ್ವಿನ್ ಸುಜೀರ್, ಬಂಟ್ವಾಳ ಸಿಡಿಪಿಒ ಗಾಯತ್ರಿ ಕಂಬಳಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಸಂಸ್ಥೆಯ ಪ್ರವರ್ತಕ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.