ಬಂಟ್ವಾಳ: ಎಲೆಕ್ಟ್ರಾನಿಕ್ಸ್, ಫರ್ನಿಚರ್ ಮತ್ತಿತರ ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಸೇವಾ ಕ್ಷೇತ್ರದಲ್ಲಿ ಹೆಸರುವಾಸಿಯಾದ ಕಲ್ಲಡ್ಕದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ಸ್ ನ ನೂತನ ಮಳಿಗೆ ಬಿ.ಸಿ.ರೋಡಿನ ತಲಪಾಡಿಯಲ್ಲಿ ಅ.25 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಶುಭಾರಂಭಗೊಳ್ಳಲಿದೆ.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ನೂತನ ಮಳಿಗೆ ಉದ್ಘಾಟಿಸಲಿರುವರು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಮೇಜರ್ ಅಫ್ಲೈಯನ್ಸಸ್ ಲಿ.ನ ವಿತರಕ ಶಶಿಧರ ಶೆಟ್ಟಿ, ಎಲ್.ಜಿ. ಇಲೆಕ್ಟ್ರೋನಿಕ್ಸ್ ನ ಮಂಗಳೂರು ಬ್ರಾಂಚ್ ಮ್ಯಾನೇಜರ್ ಅಶ್ವನಿ ಕುಮಾರ್ ಸಿ. ಬ್ಯಾಂಕ್ ಆಫ್ ಬರೋಡದ ಕಲ್ಲಡ್ಕ ಶಾಖಾ ಪ್ರಬಂಧಕ ಪ್ರಣಮ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಲ್ಲಾ ಕಂಪೆನಿಗಳ ಟಿ.ವಿ., ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಗ್ರೈಂಡರ್, ಮೊಬೈಲ್, ಮಿಕ್ಸರ್ ಗ್ರೈಂಡರ್ ಸಹಿತ ಎಲ್ಲಾ ವಿಧದ ಗೃಹೋಪಯೋಗಿ ವಸ್ತುಗಳು ಪಿಠೋಪಕರಣಗಳು ಆಕರ್ಷಕ ದರದಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲದ ದೃಷ್ಟಿಯಿಂದ ಹೋ ಡೆಲಿವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರವರ್ತಕ ಗಿರೀಶ್ ನಿಟಿಲಾಪುರ ತಿಳಿಸಿದ್ದಾರೆ.