ಬಂಟ್ವಾಳ: ಗೃಹೋಪಯೋಗಿ ವಸ್ತುಗಳ ನೂತನ ಮಾರಾಟ ಮಳಿಗೆ ಭದ್ರಾ ಹೋಮ್ ಅಪ್ಲೈಯನ್ಸಸ್ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿ ಅ. 25 ರಂದು ಭಾನುವಾರ ಉದ್ಘಾಟನೆಗೊಳ್ಳಲಿದೆ.
ಬೆಳಿಗ್ಗೆ 10.30ಕ್ಕೆ ಎಸ್ ಸಿ ಡಿಸಿಸಿ ಬ್ಯಾಂಕಿನ ನಿವೃತ್ತ ಆಡಳಿತ ನಿರ್ದೇಶಕ ಪಿ.ನಾರಾಯಣ ಕಾಮತ್ ಉದ್ಘಾಟಿಸಲಿರುವರು, ಎಂ.ವರದ ಆಚಾರ್ಯ ಮತ್ತು ಆಶಾಲತಾ ಬಾಯಿ ಬಿ. ಉಪಸ್ಥಿತರಿರುವರು.
ಬ್ರಾಂಡೆಡ್ ಕಂಪೆನಿಗಳ ಎಲ್ಲಾ ಮಾದರಿಯ ಉತ್ಪನ್ನಗಳು ಗ್ರಾಹಕರಿಗೆ ಒಂದೇ ಸೂರಿನಡಿ ಲಭ್ಯವಾಗಲಿದ್ದು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಉಚಿತ ಹೋಂ ಡೆಲಿವರಿ, ಎಕ್ಸ್ ಚೇಂಜ್ ಆಫರ್ ಗಳು
ಗ್ರಾಹಕರಿಗಾಗಿ ಕಲ್ಪಿಸಲಾಗಿದೆ. ಗೃಹಪಯೋಗಿ ವಸ್ತುಗಳ ಮಾರಾಟದೊಂದಿಗೆ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುವುದು ಸಂಸ್ಥೆಯ ಆದ್ಯತೆಯಾಗಿದೆ ಎಂದು ಸಂಸ್ಥೆಯ ಪ್ರವರ್ತಕ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.