ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಕಾಮಗಾರಿ, ಮುಖ್ಯ ಮಂತ್ರಿ ಪರಿಹಾರ ನಿಧಿ ,ಅಣೆಕಟ್ಟು ಕಾಮಗಾರಿ, ಸಂಪರ್ಕ ರಸ್ತೆ ಮತ್ತು ಸೇತುವೆ, ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಮಾಡುವ ಪ್ರತಿಯೊಂದು ಮನವಿಗೆ ಕೋಟ್ಯಾಂತರ ಅನುದಾನವನ್ನು ನೀಡುತ್ತಾ ನವ- ಕರ್ನಾಟಕ ನಿರ್ಮಾಣ ಹೆಜ್ಜೆ ಇಡುತ್ತಿರುವ ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರವರು ರಾಜ್ಯದ ಪಾಲಿಗೆ ಕಾಮಧೇನು ಇದ್ದಂತೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಅವರು ಬಂಟ್ವಾಳ ಮಂಡಲ ಬಿ.ಜೆ.ಪಿ.ವತಿಯಿಂದ ಕೊಯಿಲ ಗ್ರಾಮದ ಪಿಲ್ಕಾಜೆಗುತ್ತು ಎಂಬಲ್ಲಿ ನಡೆದ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ.ಜೆ.ಪಿ.ಕುಟುಂಬ ಮಿಲನ ಕಾರ್ಯಕ್ರಮ ದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಿದರು..
ಗ್ರಾಮ ಪಂಚಾಯತ್ ಅನುದಾನ ಹೆಚ್ಚಳ ಉಚಿತ ಗ್ಯಾಸ್ ಸಂಪರ್ಕ ನೀಡಿಕೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ಸೇರಿದಂತೆ ಹಲವಾರು ಯೋಜನೆಗಳಿಗೆ ಕೇಂದ್ರ ಸರ್ಕಾರ ಕೋಟ್ಯಾಂತರ ಅನುದಾನ ಬಿಡುಗಡೆ ಯಾಗುತ್ತಿದೆ.ಇದೆಲ್ಲ ಮಹತ್ತರ ಬದಲಾವಣೆ ಭಾರತ ದೇಶದ ನಾಯಕತ್ವದ ಬದಲಾವಣೆ ಯಿಂದ,ಮಾತ್ರ ಸಾದ್ಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತ ವಿರುವ ಗ್ರಾಮ ಪಂಚಾಯತ್ ಗಳ ನಾಯಕತ್ವದ ಬದಲಾವಣೆಗೆ ಕಾರ್ಯಕರ್ತರು ಸಿದ್ದರಾಗಿ ಎಂದರು.
ಭಾರತೀಯ ಜನತಾ ಪಕ್ಷದ ಸದಸ್ಯತ್ವ ಸಂಖ್ಯೆ 17 ಕೋಟಿ ಗೂ ಮಿಗಿಲಾಗಿ ಪ್ರಪಂಚದಲ್ಲಿ ಅತ್ಯಂತ ಸದಸ್ಯರು ಇರುವ ಎಕೈಕ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದ್ದು ನಮಗೆಲ್ಲ ಹೆಮ್ಮೆಯಾಗಿದೆ.ಬಿ.ಜೆ.ಪಿ.ಯಲ್ಲಿ ಸಾಮಾನ್ಯ ಕಾರ್ಯಕರ್ತರು ಸಹ ಅತ್ಯುನ್ನತ ಹುದ್ದೆಗೆ ಹೋಗಬಲ್ಲರು ಎಂಬುದಕ್ಕೆನಮ್ಮ ರಾಷ್ತ್ರಪತಿ ರಮನಾಥ ಕೋವಿಂದ್,ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ,ನಮ್ಮವರೇ ಆದ ನಳಿನ್ ಕುಮಾರ್ ಕಟೀಲ್ ಪ್ರಮುಖ ಸಾಕ್ಷಿ ಯಾಗಿದ್ದಾರೆ.ಈ ಎಲ್ಲಾದಕ್ಕೂ ಮೂಲ ಪ್ರೇರಣೆ ರಾಷ್ಟ್ರೀಯ ಸ್ವಯಂ ಸಂಘದ ಶಿಕ್ಷಣವೇ ಸ್ಪೂರ್ತಿಯಾಗಿದೆ ಎಂದರು.
ಆ ಪಂಚಾಯತ್ ಚುನಾವಣಾ ಬಂಟ್ವಾಳ ಮಂಡಲ ಪ್ರಭಾರಿ ದೇವದಾಸ್ ಶೆಟ್ಟಿ ಕೇಂದ್ರ ಮತ್ತು ರಾಜ್ಯದ ವಿವಿಧ ಆಯೋಜನೆ ಮತ್ತು ಬಿಡುಗಡೆ ಗೊಂಡ ಅನುದಾನ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ಮಂಡಲ ಬಿ.ಜೆ.ಪಿ.ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಬಿ.ಜೆ.ಪಿ.ಪರವಾದ ವಾತಾವರಣ ಸೃಷ್ಟಿ ಯಾಗುತ್ತಿದ್ದು ಕಾರ್ಯಕರ್ತರು ಮತ ಪರಿವರ್ತನೆ ಮಾಡುವ ಮೂಲಕ ಕ್ರಮವಹಿಸ ಬೇಕಾಗಿದೆ ಎಂದರು.
ಹಿರಿಯ ಬಿ.ಜೆ.ಪಿ.ಕಾರ್ಯಕರ್ತ ಕೊರಗಪ್ಪ ಅಂಚನ್ ಪಿಲ್ಕಾಜೆಗುತ್ತು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ ಬಂಟ್ವಾಳ ಮಂಡಲ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ,ಬಂಟ್ವಾಳ ಗ್ರಾಮ ಪಂಚಾಯತ್ ಚುನಾವಣಾ ಸಹ ಪ್ರಭಾರಿ ಪ್ರಭಾಕರ ಪ್ರಭು,ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೀತರಾಮ ಪೂಜಾರಿ, ಪಕ್ಷದ ಮಂಡಲ ಉಪಾದ್ಯಕ್ಸರಾದ ಚಿದಾನಂದ ರೈ,ಪ್ರಮುಖರಾದ ಪುರುಷೋತ್ತಮ ಶೆಟ್ಟಿ, ಶೇಖರ್ ಪೂಜಾರಿ ಪಿಲ್ಕಾಜೆ,ಹರೀಶ್ ಆಚಾರ್ಯ,ಪರಮೇಶ್ವರ ಪೂಜಾರಿ, ಮಾದವ ಬಂಗೇರ, ರಾಘವ ಅಮೀನ್ ,ರತ್ನಕುಮಾರ್ ಚೌಟ, ದಿನೇಶ್ ಶೆಟ್ಟಿ ದಂಬೆದಾರ್,ಇಂದಿರಾ,ಪುಷ್ಪ, ಸಂತೋಷ ರಾಯಿಬೆಟ್ಟು,ಪ್ರಭಾಕರ ಶೆಟ್ಟಿ ವಾಮದಪದವು,ದಯಾನಂದ ಸಪಲ್ಯ,ಪುರುಷೋತ್ತಮ ಅಂಚನ್,ಉಪಸ್ಥಿತರಿದ್ದರು.
ಎ.ಪಿ.ಎಮ್.ಸಿ .ನಾಮಕರಣ ಸದಸ್ಯ ವಸಂತ ಅಣ್ಣಾಳಿಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.