ಬಂಟ್ವಾಳ : ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಕೀನಾ ನಾಸೀರ್ ಇವರು ಸಲ್ಲಿಸಿರುವ ತಾರತಮ್ಯ ಮತ್ತು ಬಹಿಷ್ಕರಣ : ಕರ್ನಾಟಕದಲ್ಲಿ ಮುಸ್ಲಿಂ ಮಹಿಳೆಯರ ವಿದ್ಯಾಭ್ಯಾಸ ಮತ್ತು ಉದ್ಯೋಗ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರಧಾನ ಮಾಡಿದೆ. ಇವರು ಮಂಗಳೂರಿನ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ವಿಭಾಗದ ಪ್ರೊಫೆಸರ್ ವಿಶ್ವನಾಥ ಇವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ. ನಾಡೋಜ ಸಾರೋಜ ಅಬೂಬಕ್ಕರ್ ಸೊಸೆಯಾಗಿದ್ದು ಕುಕ್ಕಾಡಿ ಕುಟುಂಬಕ್ಕೆ ಸೇರಿದ್ದಾರೆ.