ಮಂಗಳೂರು: ನಶಿಸುತ್ತಿರುವ ಕುಟುಂಬ ವೈದ್ಯ ಪದ್ದತಿಯನ್ನು ಉಳಿಸಿ ಕೊಳ್ಳ ಬೇಕಾದುದು ಈಗಿನ ಅನಿವಾರ್ಯತೆ, ಹಿರಿಯ ಕುಟುಂಬ ವೈದ್ಯರಾಗಿ 50 ರ ದಶಕ ದಲ್ಲೇ ಜನಮಾನಸದಲ್ಲಿ ಹೆಸರು ಮಾಡಿದ್ದ ಡಾ ಕೆ ಆರ್ ಕಿಣಿ ಯವರ ಚಿಂತನೆ ಮತ್ತು ಸೇವೆ ಇಂದಿಗೂ ಸ್ಮರಣೀಯ ಎಂದು ಐಎಂಎ ಅಧ್ಯಕ್ಷ, ಖ್ಯಾತ ಕುಟುಂಬ ವೈದ್ಯ ಡಾ ಎಂ ಅಣ್ಣಯ್ಯ ಕುಲಾಲ್ ಅಭಿಪ್ರಾಯ ಪಟ್ಟರು.
ಐಎಂಎ ವತಿಯಿಂದ ಮಂಗಳೂರಲ್ಲಿ ನಡೆದ ಡಾ. ಕೆ.ಆರ್. ಕಿಣಿ ಸಂಸ್ಮರಣೆ ದತ್ತಿ ಉಪನ್ಯಾಸ ಮತ್ತು ಕ್ಷಯ ರೋಗ ನಿವಾರಣಾ ಆಂದೋಲನದಲ್ಲಿ ಅವರು ಮಾತನಾಡಿದರು.
ದತ್ತಿ ಉಪನ್ಯಾಸವನ್ನು ಡಾ ಸತೀಶ್ ಕಲ್ಲಿಮಾರ್ ನಡೆಸಿ ಕೊಟ್ಟರು. ಕ್ಷಯ ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಡಾ.ದೇವಿಗಾನ್ ಚಿದಂಬರ ಮಾಹಿತಿ ನೀಡಿದರು. ಅಗಲಿದ ಹಿರಿಯ ವೈದ್ಯರುಗಳಾದ ಡಾ. ಏ.ವಿ.ಶೆಟ್ಟಿ.
ಡಾ.ಎಂ.ಆರ್.ಶೆಟ್ಟಿ, ಡಾ. ಎಸ್.ಆರ್.ಶೆಟ್ಟಿ. ಡಾ ದೇವದಾಸ್ ಹೆಗ್ಡೆಯವರಿಗೆ ಡಾ.ಎಂ. ವಿ.ಪ್ರಭು ನುಡಿ ನಮನ ಸಲ್ಲಿಸಿದರು. ಕಾರ್ಯದರ್ಶಿ ಡಾ. ರಶ್ಮಿ ಕುಂದಾಪುರ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಡಾ. ಜಿ.ಕೆ. ಭಟ್ ಸಂಕಬಿತ್ತಿಲು ಲೆಕ್ಕ ಪತ್ರ ಮಂಡಿಸಿದರು. ಚುನಾವಣಾ ಅಧಿಕಾರಿ ಡಾ ಸಚ್ಚಿದಾನಂದ ರೈ ನೂತನ ಪದಾಧಿಕಾರಿಗಳ ಚುನಾವಣಾ ಫಲಿತಾಂಶ ಘೋಷಿಸಿದರು. ನಿಯೋಜಿತ ಅಧ್ಯಕ್ಷ ಡಾ ಎಂ. ಎ.ಆರ್ ಕುಡ್ವ, ಮಾಜಿ ಅಧ್ಯಕ್ಷ ಡಾ. ಮುಕುಂದ ಹಾಗೂ ಡಾ. ಕೆ. ಆರ್. ಕಿಣಿ ಕುಟುಂಬದ ಪ್ರತಿನಿಧಿಗಳು ಉಪಸ್ಥಿತರಿದ್ದರು .ಡಾ ರಶ್ಮಿ ಕುಂದಾಪುರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು