ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರೊಟಿ ಬೈಲು ಎಂಬಲ್ಲಿ ಶಾರದಾ ಧರ್ಮಸ್ವಾಮಿ ಮತ್ತು ಪುಷ್ಪರಾಜ್ ಅವರ ಮನೆ ಕುಸಿದು ಬಿದ್ದು ಸಂಪೂರ್ಣ ಹಾನಿಗೀಡಾಗಿದ್ದ ಮನೆಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಭೇಟಿ ನೀಡಿ ಪರಿಶೀಲಿಸಿ ಇಲಾಖಾ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಸೂಚಿಸಿದರು. ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷರೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ಪರಿಶೀಲಿಸಲು ಸೂಚಿಸಿ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ತಾಲೂಕು ಪಂಚಾಯತ್ ಸದಸ್ಯೆಗಾಯತ್ರಿ ರವೀಂದ್ರ ಸಪಲ್ಯ, ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್,ನರಿಕೊಂಬು ವಲಯ ಅಧ್ಯಕ್ಷ ಮಾಧವ ಪೂಜಾರಿ ಕರ್ಬೆಟ್ಟು,ಮಾಜಿ ವಲಯ ಅಧ್ಯಕ್ಷರಾದ ಲಕ್ಷ್ಮಣ ಸಪಲ್ಯ,ರಮೇಶ್ ಪೂಜಾರಿ ಬೋರುಗುಡ್ಡೆ,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಲ್ಬರ್ಟ್ ಮೆನೇಜಸ್, ನರಿಕೊಂಬು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಕರ್ಬೆಟ್ಟು,ಲೋಕೇಶ್ ಪಿ ಜೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಶ್ವನಾಥ ಪೂಜಾರಿ, ರವೀಂದ್ರ ಸಪಲ್ಯ, ಚಂದ್ರಾವತಿ ನಾಯ್ಕ, ಲಿಂಗಪ್ಪ ಕೊಟ್ಟಾರಿ, ಕೃಷ್ಣಪ್ಪ ಪೂಜಾರಿ, ಶೇಖರ ಪೂಜಾರಿ ಅಂತರ ಹೇಮಾ ಕುರ್ಚಿಪಲ್ಲ, ಪ್ರಮುಖರಾದ ಅರುಣ್ ಶೆಟ್ಟಿ,ಹರೀಶ್ ಕೆ, ಸುಂದರ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು