ಬಂಟ್ವಾಳ: ರೈತಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬೆಂಬಲಿಸಿ, ರೈತ ಕಾರ್ಮಿಕ, ದಲಿತ ವಿರೋಧಿ ಸುಗ್ರಿವಾಜ್ಞೆಗಳ ವಾಪಸ್ಸಾತಿಯನ್ನು ಆಗ್ರಹಿಸಿ ಕಾಂಗ್ರೆಸ್ ಪಕ್ಷ, ಸಿಪಿಐ, ಸಿಪಿಐ( ಮಾರ್ಕ್ಸ್ವಾದಿ) ಜಾತ್ಯತೀತ ಜನತಾದಳ, ಮಾನವ ಬಂಧುತ್ವ ವೇದಿಕೆ, ಪ್ರಜಾ ಪರಿವರ್ತನಾ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಕೇಂದ್ರ ಸರಕಾರ ಬೇರೆ ಬೇರೆ ಆಮಿಷಗಳ ಮೂಲಕ ರೈತರನ್ನು, ಜನ ಸಾಮಾನ್ಯರನ್ನು ಮೋಸ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ರೈತರನ್ನು ಬೀದಿಗೆ ತಳ್ಳಿ ನಿರ್ಗತಿಕರನ್ನಾಗಿ ಮಾಡಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡೀಸ್, ರಾಮಣ್ಣ ವಿಟ್ಲ, ಪ್ರಮುಖರಾದ ಪದ್ಮನಾಭ ರೈ, ಜನಾರ್ದನ ಚೆಂಡ್ತಿಮಾರ್, ಗಂಗಾಧರ ಪೂಜಾರಿ, ಸದಾಶಿವ ಬಂಗೇರ, ಮೊನೀಶ್ ಆಲಿ, ವೆಂಕಪ್ಪ ಪೂಜಾರಿ, ಪಿ.ಎಸ್. ರಹೀಂ, ವಾಸು ಪೂಜಾರಿ, ಲುಕ್ಮಾನ್, ಸಂಜೀವ ಪೂಜಾರಿ, ಪ್ರಭಾಕರ ದೈವಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.