ಕೆ ಎಸ್ ಟಿ ಎ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಭಾನುವಾರ ಕಿಯೋನಿಕ್ಸ್ ನ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಅವರನ್ನು ಅಭಿನಂದಿಸಲಾಯಿತು. ಬಳಿಕ ಅವರೊಂದಿಗೆ ಮಾತುಕತೆ ನಡೆಸಿ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ಕೆ ಎಸ್ ಟಿ ಎ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವಸಂತ, ರಾಜ್ಯದ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಂಡಿ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ್ ಕುಲಾಲ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಎಮ್ . ಉರ್ವ ವಲಯ ಸಮಿತಿಯ ಅಧ್ಯಕ್ಷ ಒಜಯ ಪ್ರಕಾಶ್, ಬಂಟ್ವಾಳ ವಲಯ ಸಮಿತಿ ಅಧ್ಯಕ್ಷರು ವಸಂತ ಕುಲಾಲ್ ಪ್ರಧಾನ ಕಾರ್ಯದರ್ಶಿ ತುಳಸಿ ಆರ್ ., ಬಿ.ಸಿ.ರೋಡ್ ವಲಯ ಸಮಿತಿಯ ಅಧ್ಯಕ್ಷ ಸುರೇಶ್ ಹಾಗೂ ನವೀನ ಕುಲಾಲ್ ಉಪಸ್ಥಿತರಿದ್ದರು.