ಬಂಟ್ವಾಳ: ಮುಳುಗಡೆ ಭೂಮಿಗೆ ಭೂ ಪರಿಹಾರ ದೊರಕದೆ ಇರುವ ಬಗ್ಗೆ ತುಂಬೆ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಂತ್ರಸ್ತರ ರೈತರು ನಗರಪಾಲಿಕೆ ಆಯುಕ್ತರನ್ನು ಭೇಟಿಯಾಗಿ ನ್ಯಾಯೋಚಿತ ಪರಿಹಾರ ಒದಗಿಸುವಂತೆ ಲಿಖಿತ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಜಾನ್ ಲೋಬೋ, ಅಂಜಲಿ ಡಿಸೋಜ, ಗ್ರೆಟ್ಟ ಡಿಸೋಜ, ವಾಸಿ ಡಿಸೋಜ, ಗ್ಲಾ ಶನ್ ಡಿಸೋಜ, ಪ್ರಜ್ವಲ್ ಡಿಸೋಜ, ಜೀತ ಡಿಸೋಜ, ಫೆಲಿಕ್ಸ್ ಸವಿತಾ ಡಿಸೋಜ, ಸೀತಾ ಮೇರಿ ಡಿಸೋಜ, ಅನಿಶಾ ನವೀನ ಸಿಂತಿಯ, ಮೇಲರಾಯ್ ಧಲ್ಸೀನಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.