ಬಂಟ್ವಾಳ: ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು ವತಿಯಿಂದ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಬಣ್ಣ – 2020 ಇದರ ಬಹುಮಾನ ವಿತರಣಾ ಕಾರ್ಯಕ್ರಮವು ಮಂಚಿಯ ಲಯನ್ಸ್ ಕ್ಲಬ್ಬಿನಲ್ಲಿ ಜರುಗಿತು.
ಲಯನ್ಸ್ ಕ್ಲಬ್ಬಿನ ಡಾ. ಗೋಪಾಲಾಚಾರ್ ಮಾತನಾಡಿ ಚಿತ್ರಕಲೆಯು ಶೈಕ್ಷಣಿಕ ವ್ಯವಸ್ಥೆಯೊಳಗಡೆ ತೀರಾ ಆವಶ್ಯಕವಾಗಿರುವ ವಿಷಯವಾಗಿದ್ದು ಮನಗಾಣುವ ಮನಸ್ಸುಗಳು ಇದ್ದಾಗ ಮಾತ್ರ ಅದು ಫಲಪ್ರದವಾಗುತ್ತದೆ. ಬಹಳ ಪ್ರೀತಿಯಿಂದ ಚಿತ್ರಕಲೆಯನ್ನು ಆಸ್ವಾದಿಸಿದರೆ ಜೀವನಾನಂದವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಲಾಭಿವ್ರದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಕೊಟ್ಟಾರಿ, ಶಾಲಾ ಮುಖ್ಯೋಪಾಧ್ಯಾಯ ವಿ. ಶ್ರೀರಾಮ ಮೂರ್ತಿ ಇವರು ಮಕ್ಕಳಿಗೆ ಶುಭಾಶಯ ಕೋರಿದರು.
ಶಾಲಾ ಶಿಕ್ಷಕಿಯರಾದ ಶಾಂತಾ, ಗೀತಾ, ಪ್ರೇಮಲತಾ ಉಪಸ್ಥಿತರಿದ್ದರು. ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮವನ್ನು ಸಂಯೋಜನೆಗೊಳಿಸಿದರು.