ಬಂಟ್ವಾಳ: ಯುವಶಕ್ತಿ ಕಲಾವೃಂದ ಕಿನ್ನಿಬೆಟ್ಟು ಮತ್ತು ಅಮ್ಟಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಬಂಟ್ವಾಳ ಇದರ ಸಹಭಾಗಿತ್ವದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಾಣಿ ಮತ್ತು ವಿತರಣಾ ಕಾರ್ಯಕ್ರಮ ಭಾನುವಾರ ಅಮ್ಟಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿಯಲ್ಲಿ ನಡೆಯಿತು.
ಯುವಶಕ್ತಿ ಕಲಾವೃಂದದ ಅಧ್ಯಕ್ಷ ಲೋಕೇಶ್ ಸುವರ್ಣ ಸದಸ್ಯರಾದ ಯತೀಶ್ ಕರ್ಕೇರ, ಚಂದ್ರಹಾಸ ಕೊಟ್ಟಾರಿ, ಗಣೇಶ್, ಅಕ್ಷಯ್, ಪ್ರಕಾಶ್, ಅಮ್ಟಾಡಿ ಪಂಚಾಯಿತಿ ಮಾಜಿ ಸದಸ್ಯ ಸುನೀಲ್ ಕಾಯರ್ಮಾರ್, ಸುರೇಂದ್ರ ಕಿನ್ನಿಬೆಟ್ಟು, ಅಮ್ಟಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಯಶವಂತ ಶೆಟ್ಟಿ, ಉಪಾಧ್ಯಕ್ಷ ಉದಯಕುಲಾಲ್, ಕಾರ್ಯದರ್ಶಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.