ಸಿದ್ದಕಟ್ಟೆ: ಕರಾವಳಿಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವುದರ ಮೂಲಕ ಮುಂದಿನ ಅಕ್ಟೋಬರ್-ನವಂಬರ್ ತಿಂಗಳಲ್ಲಿ ಯೂನಿಟ್ ಒಂದಕ್ಕೆ ರೂ 2 ಸಾವಿರ ದರದಲ್ಲಿ ಲಭ್ಯವಿರುವ ಮರಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಬಿ.ಜೆ.ಪಿ.ಅಧ್ಯಕ್ಷ, ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಹೇಳಿಕೆಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕರು ವಿನಾ ಕಾರಣ ಕ್ಷುಲ್ಲಕ ಕಾರಣಕ್ಕೆ ನೆಪವೊಡ್ದಿ ಸಂಸದರನ್ನು ಟೀಕಿಸುವುದು ಸರಿ ಅಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ರವರು ಒಂದು ಲೋಡ್ ಮರಳಿಗೆ 2 ಸಾವಿರ ಹೇಳಿಲ್ಲ .
ಪ್ರತಿ ಯೂನಿಟ್ ಮರಳಿಗೆ ರೂ 2000 ರಂತೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂಬುದಾಗಿ ಹೇಳಿ ದ್ದನ್ನು. ಅಪಾರ್ಥ ಮಾಡಿಕೊಂಡು ಒಟ್ಟಾರೆ ಪ್ರತಿಕ್ರಿಯೆ ನೀಡೊದು ಈಗೀಗ ಜನ ಒಪ್ಪೊದಿಲ್ಲ.ಈ ಬಗ್ಗೆ
ನಿಜವಾಗಿಯೂ ಅರ್ಥ ಮಾಡಿಕೊಂಡು ರಾಜಕೀಯ ಮಾಡೊದು ಒಳಿತು ಎಂದೂ ಪ್ರಭಾಕರ ಪ್ರಭು
ಕಾಂಗ್ರೇಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಜನೋಪಕಾರಿ ಯೋಜನೆಗಳನ್ನು ಸಹಿಸದಿರುವವರು ತನ್ನ ಮೈ ಯನ್ನು ತಾನೇ ಪರಚಿದಂತಾಗಿದೆ ಕಾಂಗ್ರೆಸಿಗರ ಪರಿಸ್ಥಿತಿ. ಎಂದು ಪ್ರಭಾಕರ ಪ್ರಭು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲೆಂದರಲ್ಲಿ ಮರಳು ಮಾಫಿಯಾ ನಡೆದಿರುವುದರಿಂದಲೇ ಮರಳು ದುಬಾರಿಯಾಗಲು ಕಾರಣ ವಾಗಿದೆ.
ಇನ್ನಾದರೂ ಅಭಿವೃದ್ಧಿ ಯೋಜನೆ ಬಗ್ಗೆ ಮಾತಾನಾಡೋಣ ಎಂದು ಪ್ರಭಾಕರ ಪ್ರಭು
ಮನವಿ ಮಾಡಿದ್ದಾರೆ.