ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ತುಂಬೆ ವಲಯ, ರೋಟರಿ ಕ್ಲಬ್ ಬಂಟ್ವಾಳ ಮತ್ತು ಫರಂಗಿಪೇಟೆ ಇದರ ಜಂಟಿ ಆಶ್ರಯದಲ್ಲಿ ಮೂರು ದಿನಗಳ
ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೋಂದಾಣಿ ಅಭಿಯಾನ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ರೋಟರಿ ಕ್ಲಬ್ ನ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್ ಅಭಿಯಾನ ಉದ್ಘಾಟಿಸಿದರು. ಅವರು ಮಾತನಾಡಿ ಸರಕಾರದ ಕಾರ್ಯಕ್ರಮವನ್ನು ಸಂಘಟನೆಗಳು ಸಾರ್ವಜನಿಕವಾಗಿ ಜನರಿಗೆ ತಲುಪಿಸುವುದರಿಂದ ಯೋಜನೆ ಯಶಸ್ವಿಯಾಗುತ್ತದೆ ಜೊತೆಗೆ ಜನರಿಗೂ ಪ್ರಯೋಜನವಾಗುತ್ತದೆ ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ನಾರಾಯಣ ಹೆಗ್ಡೆ, ಕಾರ್ಯದರ್ಶಿ ವಾಣಿ ಕಾರಂತ್, ರೋಟರಿ ಕ್ಲಬ್ ಫರಂಗಿಪೇಟೆಯ ಅಧ್ಯಕ್ಷ ರಮೇಶ್ ತುಂಬೆ, ನಿಕಟಪೂರ್ವ ಅಧ್ಯಕ್ಷ ಜಯರಾಮ ಶೇಖ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಪ್ರಮುಖರಾದ ತಾರಾನಾಥ ಕೊಟ್ಟಾರಿ, ದೇವದಾಸ್ ಶೆಟ್ಟಿ ಕೊಡ್ಮಾನ್, ಎಂ.ಕೆ. ಖಾದರ್, ಪದ್ಮನಾಭ ಶೆಟ್ಟಿ ಪುಂಚಮೆ, ಸುಂದರ ಶೆಟ್ಟಿ ಕಲ್ಲತಡಮೆ, ದಿನಕರ ಕರ್ಕೆರ, ರಮೇಶ್ ಶೆಟ್ಟಿ ಅಡ್ಯಾರ್, ದಿನೇಶ್ ಶೆಟ್ಟಿಕೊಟ್ಟಿಂಜ, ವೃಂದ ಪೂಜಾರಿ ,ಶ್ರೀ ಮಮತಾ, ಪ್ರಶಾಂತ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ಸೆ. 20 ರಿಂದ ಸೆ.22 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.