ಬಂಟ್ವಾಳ: ಭಾರತೀಯ ಜನತಾ ಪಾಟಿ೯ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಇತ್ತೀಚೆಗೆ ನಿಧಾನರಾದ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ಶ್ರದ್ದಾಂಜಲಿ ಸಭೆಯು ಕ್ಷೇತ್ರ ಉಪಾಧ್ಯಕ್ಷ ರೋನಾಲ್ಡ್.ಡಿ.ಸೋಜಾರವರ ಅಧ್ಯಕ್ಷೆತೆಯಲ್ಲಿ ಜರಗಿತು. ಸಭೆಯಲ್ಲಿ ಕ್ಷೇತ್ರ ಪ್ರಧಾನ ಕಾರ್ಯದಶಿ೯ಗಳಾದ ರವೀಶ್ ಶೆಟ್ಟಿ, ಡೊಂಬಯ ಅರಳ, ಜಿಲ್ಲಾ ಯುವಮೋಚಾ೯ ಪ್ರಧಾನ ಕಾರ್ಯದಶಿ೯ ಸುದಶ೯ನ್ ಬಜ ಮುಂತಾದ ಪ್ರಮುಖರು ಭಾಗವಹಿಸಿದ್ದರು.