ಸಜಿಪ: ಇಲ್ಲಿನ ಸಜಿಪ ಜನ ಸೇವಾ ಟ್ರಸ್ಟ್ (ರಿ)ಇದರ ವತಿಯಿಂದ ಸಜೀಪಮುನ್ನೂರು ಗ್ರಾಮದ ಶಾಂತಿನಗರ ನಿವಾಸಿ ಶಶಿಧರ್ ಮಡಿವಾಳ ಇವರ ಚಿಕಿತ್ಸೆಗೆ ಆರ್ಥಿಕ ಸಹಾಯಧನದ ಚೆಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಹಸ್ತಾಂತರಿಸ ಲಾಯಿತು. ಈ ಸಂದರ್ಭ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಯಶವಂತ ದೇರಾಜೆ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ಎಂ ಸುಬ್ರಹ್ಮಣ್ಯ ಭಟ್, ನಿತಿನ್ ಅರಸ, ರಮೇಶ್ ಕುಲಾಲ್ , ವಿಶ್ವನಾಥ ಬೆಳ್ಚಾಡ, ಸುರೇಶ್ ಬಂಗೆರ, ಭಾಸ್ಕರ ಪ್ರಶಾಂತ, ನವೀನ್ ಉಪಸ್ಥಿತರಿದ್ದರು.