ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ನಡೆದ ‘ಶಿಕ್ಷಕರ ದಿನಾಚರಣೆಯ ಗುರುವಂದನಾ ಕಾರ್ಯಕ್ರಮದ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಗೀತ ಶರ್ಮ, ಇಸ್ಮಾಯಿಲ್ ಕೆ. ಹಾಗೂ ರಾಧಾಕೃಷ್ಣ ಬಾಳಿಗಾರವರನ್ನು ಲಯನ್ಸ್ ಉಪ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ನಿರ್ಮಲ ಹೃದಯ ವಿಶೇಷ ಶಾಲೆಯ ಏಳಿಗೆಗೆ ಶ್ರಮ ವಹಿಸುತ್ತಿರುವ ಗಣೇಶ್ ಪಜೀರ್ ಮತ್ತು ರವೀಂದ್ರ ಕೆ. ಹಾಗೂ ಸಾಧಕ ವಿಶೇಷ ವಿದ್ಯಾರ್ಥಿ ಕೌಶಿಕ್ ಆಚಾರ್ಯ ಮತ್ತು ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಯಲ್ಲಿ ಕನ್ನಡ, ಇಂಗ್ಲೀಷ್ ಮಾಧ್ಯಮದಲ್ಲಿ
ಪ್ರಥಮ ಹಾಗೂ ದ್ವಿತೀಯ ಸ್ಥಾನಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಧ್ಯಕ್ಷರಾದ ಕೃಷ್ಣಶ್ಯಾಮ್ ಎಂ., ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ, ಸ್ಥಾಪಕ ಸದಸ್ಯ ಡಾ. ಎಂ. ಶ್ಯಾಮ್ ಭಟ್, ಲಯನ್ಸ್ ವಿಶೇಷ ಶಾಲಾ ಸಂಚಾಲಕ ದಾಮೋದರ ಬಿ.ಎಂ., ಕಾರ್ಯದರ್ಶಿ ಕೆ. ವೈಕುಂಠ ಕುಡ್ವ, ಖಜಾಂಚಿ ದಿಶಾ ಆಶೀರ್ವಾದ್, ಶಿಕ್ಷಣ ಸಂಯೋಜಕಿ ಸುಜಾತ ರವಿಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.