ತುಂಬೆ : ಪ್ರಧಾನಿ ನರೇಂದ್ರ ಮೋದಿ ಯವರ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ತುಂಬೆಯ ಆಶೀರ್ವಾದ ಸೇವಾ ಸಂಘ, ಆಶೀರ್ವಾದ ಮಹಿಳಾ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿ ತುಂಬೆ ಇದರ ಜಂಟಿ ಆಶ್ರಯದಲ್ಲಿ ಉಚಿತ ಅಯುಷ್ಮಾನ್ ಕಾರ್ಡ್ ನೊಂದಣಿ ಮತ್ತು ವಿತರಣೆ ಕಾರ್ಯಕ್ರಮ ತುಂಬೆಯಲ್ಲಿ ನಡೆಯಿತು . ಈ ಸಂದರ್ಭದಲ್ಲಿ ಪರಿಸರದ ಅಂಗನವಾಡಿ ಕೇಂದ್ರಗಳಿಗೆ ಕಸದ ಬುಟ್ಟಿಗಳನ್ನು ವಿತರಿಸಲಾಯಿತು . ಜಿಲ್ಲಾ ಪಂಚಾಯತಿ ಸದಸ್ಯ ರವೀಂದ್ರ ಕಂಬಳಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಪುದು ಶಕ್ತಿ ಕೇಂದ್ರದ ಅಧ್ಯಕ್ಷ, ತಾಲೂಕು ಪಂಚಾಯತಿ ಸದಸ್ಯ ಗಣೇಶ್ ಸುವರ್ಣ ರವರ ಅದ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮ ದ ವೇದಿಕೆಯಲ್ಲಿ ಕಾರ್ಯದರ್ಶಿ ಸತೀಶ್ ನಾಯ್ಗ , ತಾಲೂಕು ಪಂಚಾಯತಿ ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ , ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್, ತುಂಬೆ ಪಂಚಾಯತಿ ಅಧ್ಯಕ್ಷೆ ಹೇಮಲತಾ ಪೂಜಾರಿ , ಪಂಚಾಯತಿ ಸದಸ್ಯರಾದ ಅರುಣ್ ಕುಮಾರ್ ಬೊಳ್ಳಾರಿ , ಶೋಭಾಲತಾ ಶೆಟ್ಟಿ , ಸಂಜೀವ ಪೂಜಾರಿ , ಭಾರತೀ , ಆಶಿರ್ವಾದ್ ಸೇವಾ ಸಂಘದ ಅಧ್ಯಕ್ಷ ಸುಶಾನ್ ಆಚಾರ್ಯ , ಮಹಿಳಾ ಸಂಘದ ಅಧ್ಯಕ್ಷೆ ಪಾರ್ವತೀ ಐತಪ್ಪ ಕುಲಾಲ್ , ಭಾಗ್ಯೋದಯ ಮಿತ್ರ ವೃಂದ ಅಧ್ಯಕ್ಷ ಮೋಹನದಾಸ್ ಪೆರ್ಲಕ್ಕೆ , ಎಳೆಯರ ಬಳಗ ಉಪಾಧ್ಯಕ್ಷ ಕಿಶೋರ್, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸನತ್ ಕುಮಾರ ಮತ್ತಿತರರು ಉಪಸ್ಥಿತರಿದ್ದರು. ಸುಶಾನ್ ಆಚಾರ್ಯ ಸ್ವಾಗತಿಸಿದರು , ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ಭೇಟಿ ನೀಡಿದರು.