ಬಂಟ್ವಾಳ: ಬಂಟ್ವಾಳದ ಬಂಟರ ಭವನ ಸಭಾಭವನದಲ್ಲಿ ಸೆ.6 ರಂದು ನಡೆಯಲಿರುವ ಜೇಸಿ ವಲಯ 15ವ್ಯವಹಾರ ಸಮ್ಮಳನದ ಅಮಂತ್ರಣ ಪತ್ರಿಕೆಯನ್ನು ಜೇಸಿಐ ಭಾರತದ ಚಾಲೆಂಜ್ ಸಂಪಾದಕ ಸಮೀತಿಯ ಸದಸ್ಯರಾದ ಜೇಸಿ ದಾಮೋದರ ಪಾಟಾಳಿ ಅನಾವರಣಗೊಳಿಸಿದರು.
ಈ ಸಂದರ್ಭ ಜೇಸಿಐ ಬಂಟ್ವಾಳದ ಅಧ್ಯಕ್ಷ ಸದಾನಂದ ಬಂಗೇರ, ವ್ಯವಹಾರ ವಿಭಾಗದ ಸಂಯೋಜಕ ಲೋಕೇಶ್ ಸುವರ್ಣ, ಸಮ್ಮೇಳನ ನಿರ್ದೇಶಕ ನಾಗೇಶ್ ಬಾಳೆಹಿತ್ಲು, ನಿಕಟ ಪೂರ್ವ ಅಧ್ಯಕ್ಷ ಯತೀಶ್ ಕರ್ಕೆರಾ, ಕಾರ್ಯದರ್ಶಿ ಗಣೇಶ್ ಕುಲಾಲ್ ಉಪಸ್ಥಿತರಿದ್ದರು.
ಪೂರ್ವಭಾವಿ ಸಭೆ:
ಇದೇ ಸಂದರ್ಭ ಅಧ್ಯಕ್ಷ ಸದಾನಂದ ಬಂಗೇರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಸಮಿತಿ ರಚಿಸಲಾಯಿತು.