ಮಂಗಳೂರು: ಕೋವಿಡ್ ಪರೀಕ್ಷೆಯ ನೆಪದಲ್ಲಿ ಖಾಸಗಿ ಆಸ್ಪತ್ರೆಗಳ ದಂಧೆ ಶುರು ಮಾಡಿವ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೆಳಿ ಬಂದಿದೆ. ಸರ್ಕಾರದ ಆದೇಶಕ್ಕೂ ಖಾಸಗಿ ಆಸ್ಪತ್ರೆಗಳು ಕೇರ್ ಮಾಡುತ್ತಿಲ್ಲ. ಸರ್ಕಾರದ ಆದೇಶ ಕೇವಲ ಕಾಗದದ ಪತ್ರಕ್ಕೆ ಸೀಮಿತ ಆಗಿದೆಯಾ? ಎಂಬ ಸಂಶಯ ಮೂಡವಂತಾಗಿದೆ. ಸರ್ಕಾರ ನಿಗದಿ ಪಡಿಸಿರುವ ಹಣಕ್ಕಿಂತ ಹೆಚ್ಚು ಹಣವನ್ನು ಶುಲ್ಕ ರೂಪದಲ್ಲಿ ಆಸ್ಪತ್ರೆಗಳು ಪೀಕಿಸುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ನೇತೃತ್ವದಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕುಟುಂಬವೊಂದರ ತಂದೆ ಮಗ ಇಬ್ಬರಿಗೂ ಕೊರೋನಾ ಪಾಸಿಟಿವ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ೮ ದಿನ ಕಳೆದು ಮನೆಗೆ ಹೋಗಲು ತಿಳಿಸಿದ್ದರಿಂದ ಬಿಲ್ಲು ನೋಡುವಾಗ ಲಕ್ಷಗಟ್ಟಲೆ ಇದ್ದ ಕಾರಣ ಆಸ್ಪತ್ರೆ ಆಡಳಿತ ಸಮಿತಿ ಅವರಿಂದ ಸರಿಯಾದ ಉತ್ತರ ಸಿಗದ ಕಾರಣ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ರತ್ನಾಕರ್ ಅವರನ್ನು ಜಿಲ್ಲಾಧಿಕಾರಿ ಅವರೇ ಕಛೇರಿಗೆ ಕರೆಸಿ ಚರ್ಚೆ ನಡೆಸಿ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಅವರೊಂದಿಗೆ ಮಾತುಕತೆ ನಡೆಸಿದರು.
ಜಿಲ್ಲಾ ಆರೋಗ್ಯಧಿಕಾರಿ ಡಾ.ರತ್ನಾಕರ್ ರವರ ನಿರ್ದೇಶನ ಪ್ರಕಾರ ಮಂಗಳೂರಿನ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯರು ಭೇಟಿಯಾಗಲು ಅವಕಾಶ ನಿರಾಕರಿಸಿದ್ದು ಇನ್ನೊಂದು ರೋಗಿಯ ಸಂಬಂಧಿಕರು ಕೂಡ ವಿಪರೀತ ಬಿಲ್ ನೀಡಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿಯ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಆಸ್ಪತ್ರೆಯ ಮುಖ್ಯಸ್ಥರ ಸೂಚನೆಯಂತೆ ಕಂಕನಾಡಿ ಪೋಲಿಸರು ಆಗಮಿಸಿದ್ದು ನಂತರ ಆಸ್ಪತ್ರೆಯ ಮುಖ್ಯಸ್ಥರಲ್ಲಿ ನಮಗೆ ಅಷ್ಟೊಂದು ಬಿಲ್ಲು ಪಾವತಿಸಲು ಸಾಧ್ಯವಿಲ್ಲ ಆದಕಾರಣ ಡಿಸ್ಕೌಂಟ್ ನೀಡಬೇಕು ಎಂದು ಮನವರಿಕೆ ಮಾಡಿದ ನಂತರ ೧,೮೮,೮೩೬ ಬಿಲ್ ನಲ್ಲಿ ೩೮,೮೩೬ ಡಿಸ್ಕೌಂಟ್ ಮಾಡಿ ಪಾವತಿಸಿದರು. ತದನಂತರ ಮೊದಲ ರೋಗಿಗೂ ೨,೩೦,೩೪೭ ರೂ ಬಿಲ್ ನಲ್ಲಿ ೮೦,೦೦೦ ರೂ. ಬಿಲ್ ಡಿಸ್ಕೌಂಟ್ ಮಾಡಿ ರೋಗಿಯನ್ನು ಡಿಸ್ಚಾರ್ಜ್ ಮಾಡಿದ ಘಟನೆ ಈ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಆದರೆ ಆಸ್ಪತ್ರೆಯ ಇಂತಹ ದೌರ್ಜನ್ಯದ ವಿರುದ್ದ ಹಾಸೀರ್ ಪೇರಿಮಾರ್ ಮತ್ತಿತರು ಧ್ವನಿ ಎತ್ತಿದ್ದಾರೆ.
ಮನವಿ ಸಲ್ಲಿಕೆಯ ವೇಳೆ ನೌಶಾದ್ ಮಲಾರ್, ಎಂಎಸ್ಎಫ್ ಜಿಲ್ಲಾಧ್ಯಕ್ಷರಾದ ಇಶ್ರಾರ್ ಗೂಡಿನಬಳಿ, ಪ್ರಧಾನ ಕಾರ್ಯದರ್ಶಿ ಫಾಝಿಲ್ ಪೇರಿಮಾರ್, ಅಲ್-ಬಿರ್ರ್ ಕರ್ನಾಟಕ ಕೋ-ಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು, ವಿಖಾಯ ಜಿಲ್ಲಾ ಉಪಾಧ್ಯಕ್ಷ ಇಬ್ರಾಹಿಂ ಕುಕ್ಕಟ್ಟೆ, ಎಸ್ಕೆಎಸ್ಎಸ್ಎಫ್ ಕೈಕಂಬ ವಲಯ ಮುಖಂಡ ಶರೀಫ್ ಮಳಲಿ, ಎಸ್ಕೆಎಸ್ಎಸ್ಎಫ್ ಜಿಲ್ಲಾ ಕೌಂನ್ಸಿಲರ್ ಮುಸ್ತಫಾ ಬಂಗ್ಲಗುಡ್ಡೆ ಮತ್ತಿತ್ತರರು ಉಪಸ್ಥಿತರಿದ್ದರು.