ಬಂಟ್ವಾಳ: ಸಜಿಪಮೂಡ ಗ್ರಾಮದ ಕಂದೂರಿನಲ್ಲಿ ಕಮಲಾ ಎಂಬ ಬಡ ಮಹಿಳೆಯ ಕುಟುಂಬಕ್ಕೆ ಬಂಟ್ವಾಳ ತಾಲೂಕು ಕರಾವಳಿ ಕುಲಾಲ ಕುಂಬಾರ ವೇದಿಕೆ ನೇತೃತ್ವದಲ್ಲಿ ಶ್ರಮದಾನದ ಮೂಲಕ ನಿರ್ಮಾಣವಾಗುತ್ತಿರುವ ಮನೆಯ ಕಾಮಗಾರಿಯನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಸಜಿಪಮೂಡ ಗ್ರಾಮ ಕರಣಿಕರಾದ ಸ್ವಾತಿ, ಪಂಚಾಯತಿ ಅಧ್ಯಕ್ಷ ವಿಶ್ವನಾಥ್ ಬೆಳ್ಚಾಡ, ಯುವ ವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಲಾಲ ಯುವ ವೇದಿಕೆಯಿಂದ ನಿರ್ಮಾಣ ಗೊಂಡಿರುವ ಮನೆಗೆ ತಹಶೀಲ್ದಾರ್ ಭೇಟಿ