
ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಟೇಲ್ ಪದ್ಮಾಡಿಲೇಕ್ಸ್ ನೂತನ ಆಡಳಿತದೊಂದಿಗೆ ಗ್ರಾಹಕರಿಗೆ ಸೇವೆ ನೀಡಲು ಸಿದ್ದಗೊಂಡಿದೆ. ಶುದ್ದ ಸಸ್ಯಹಾರಿ ಹೊಟೇಲ್ ಇದಾಗಿದ್ದು ಶುಚಿರುಚಿಯಾದ ಉಪಾಹಾರ, ಊಟೋಪಚಾರಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ.
ನಗರ ಕೇಂದ್ರದಲ್ಲಿ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ವೆಜ್ ಫ್ಯಾಮಿಲಿ ರೆಸ್ಟೊರೆಂಟ್ ಬೇಕೆನ್ನುವುದು ಈ ಭಾಗದ ಗ್ರಾಹಕರ ಬೇಡಿಕೆಯಾಗಿತ್ತು. ಲಾಕ್ಡೌನ್ ಬಳಿಕ ಇದೀಗ ಉದ್ಯಮಿ ವಿಶ್ವನಾಥ್ ಬಂಟ್ವಾಳ ಅವರು ಮಾಲೀಕತ್ವದಲ್ಲಿ ಪದ್ಮಾ ಡಿಲೆಕ್ಸ್ ಹೊಟೇಲ್ ಪುನಾರಂಭಗೊಂಡಿದ್ದು ಗ್ರಾಹಕರ ಬೇಡಿಕೆ, ಅಗತ್ಯತೆಗಳಿಗುಣವಾಗಿ ಸೇವೆ ನೀಡಲಿದೆ. ಸೆಲೂನ್, ಸ್ಟುಡಿಯೋ, ಪತ್ರಿಕೋದ್ಯಮ, ಸ್ವರ್ಣಾಭರಣ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸುಗಳಿಸಿಕೊಂಡಿರುವ ವಿಶ್ವನಾಥ ಬಂಟ್ವಾಳ್ ಅವರು ಕಳೆದ ಕೆಲ ವರ್ಷಗಳಿಂದ ಹೊಟೇಲ್ ಉದ್ಯಮಕ್ಕೂ ಪಾದಾರ್ಪಣೆ ಮಾಡಿ ಹೆಸರು ಗಳಿಸಿದವರು. ಮೆಸ್ಕಾಂ ಕಚೇರಿ ಬಳಿ ಸಿಲ್ವರ್ ನಾನ್ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಆರಂಭಿಸಿ ಹೊಟೇಲ್ ಉದ್ಯಮದಲ್ಲೂ ಹಿಡಿತ ಸಾಧಿಸಿ ಗ್ರಾಹಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇದೀಗ ಇವರ ಮಾಲಕತ್ವದಲ್ಲಿ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಕಾರ್ಯರಂಭಗೊಂಡಿದ್ದು ಗ್ರಾಹಕರ ಬೇಡಿಕೆಗೆ ಅನುಗುಣವಾದ ಎಲ್ಲಾ ಬಗೆಯ ಆಹಾರ ಮಿತದರದಲ್ಲಿ ಲಭ್ಯವಿದೆ. ಪ್ರತ್ಯೇಕ ಫ್ಯಾಮಿಲ್ ಕೊಠಡಿಯೂ ಇದೆ.
ಸ್ವಚ್ಛತೆಗೆ ಆದ್ಯತೆ:
ಪದ್ಮಾ ಡಿಲೆಕ್ಸ್ ಹೊಟೇಲ್ನಲ್ಲಿ ಗ್ರಾಹಕರಿಗೆ ನಗು ಮೊಗದ ಸೇವೆಯೊಂದಿಗೆ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಗ್ರಾಹಕರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಟೇಲ್ನಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಟೇಲಿನ ಪ್ರವೇಶ ಬಾಗಿಲನ ಬಳಿ ಸ್ಯಾನಿಟೈಸರ್ ಇಡಲಾಗಿದೆ. ಸ್ಟೀಲ್ ಮತ್ತಿತರ ಪಾತ್ರೆಗಳನ್ನು ತೊಳದೆ ಬಳಿಕ ಬಿಸಿನೀರಿನಲ್ಲಿಟ್ಟು ಪುನರ್ ಸ್ವಚ್ಛಗೊಳಿಸುವ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸತನದೊಂದಿಗೆ ಪದ್ಮಾಡಿಲೇಕ್ಸ್ ಶುಭಾರಂಭಗೊಂಡಿದೆ.