ಬಂಟ್ವಾಳ: ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಬಂಟ್ವಾಳದ 108 ಅಂಬ್ಯುಲೆನ್ಸ್ನ ಸಿಬ್ಬಂದಿಗಳು ಮನೆಯಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಸಮಯ ಪ್ರಜ್ಞೆ ಮೆರೆದ ಘಟನೆ ಸೋಮವಾರ ಬಂಟ್ವಾಳ ತಾಲೂಕಿನ ಪಂಜಿಕಲ್ಲುವಿನಲ್ಲಿ ನಡೆದಿದೆ. ತಾಯಿ ಮಗು ಇಬ್ಬರೂ ಆರೋಗ್ಯದಿಂದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗರ್ಭಿಣಿ ಮಹಿಳೆ ಗೀತಾ ಎಂಬಾಕೆ ಹೆರಿಗೆ ನೋವಿನಿಂದ ಬಳಲುತ್ತಿರುವುದಾಗಿ ಸೋಮವರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ 108 ಅಂಬ್ಯುಲೆನ್ಸ್ಗೆ ಕರೆ ಬಂದಿತ್ತು. ಅದರಂತೆ ಅಂಬ್ಯಲೆನ್ಸ್ ಚಾಲಕ ಭೀಮಪ್ಪ ಹಾಗೂ ಶುಶ್ರೂಷಕ ಮಂಜುನಾಥ ಅವರು ಪಂಜಿಕಲ್ಲುವಿನ ಅವರ ಮನೆಗೆ ಹೋದಾಗ ಅನಿವಾರ್ಯವಾಗಿ ಮನೆಯಲ್ಲಿಯೇ ಹೆರಿಗೆ ಮಾಡಿಸಬೇಕಾಯಿತು. ಇವರ ಮನೆಗೆ ಸರಿಯಾದ ದಾರಿಯಿಲ್ಲದೆ ವಾಹನಗಳು ಹೋಗಲು ಸಾಧ್ಯವಾಗದೇ ಇದ್ದುದರಿಂದ 108 ಅಂಬ್ಯುಲೆನ್ಸ್ನ ಸಿಬ್ಬಂದಿಗಳು ಈ ನಿರ್ಧಾರ ಕೈ ಗೊಂಡರು. ಅಂಬ್ಯಲೆನ್ಸ್ ಸಿಬ್ಬಂದಿಗಳ ಮಹಿಳೆಗೆ ಮನೆಯಲ್ಲಿಯೇ ಸುರಕ್ಷಿತ ಹೆರಿಗೆ ನಡೆಸಿ ಬಳಿಕ ಮಗುವನ್ನು ಹಾಗೂ ತಾಯಿಯನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿದ್ದಾರೆ. 108 ಸಿಬ್ಬಂದಿಗಳ ಸಕಾಲಿಕ ಸ್ಪಂದನೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
108 ಅಂಬ್ಯುಲೆನ್ಸ್ ಸಿಬ್ಬಂದಿಗಳ ಸ್ಪಂದನೆ: ಗರ್ಭಿಣಿಗೆ ಮನೆಯಲ್ಲಿಯೇ ಸುರಕ್ಷಿತ ಹೆರಿಗೆ ಮಾಡಿದ ಸಿಬ್ಬಂದಿಗಳು
