ಬಂಟ್ವಾಳ: ಜನತಾ ಕರ್ಪ್ಯೂ ಸಂದರ್ಭದಲ್ಲೂ ನಗರದ ಶುಚಿತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಿಗೆ ರೋಟರಿ ಕ್ಲಬ್ ಬಂಟ್ವಾಳ ಹಾಗೂ ವಿ.ಐ.ಎಸ್.ನೆಟ್ವರ್ಕ್ ಬೆಂಗಳೂರು ಅವರ ಸಹಕಾರದಲ್ಲಿ ದಿನಬಳಕೆ ಸಾಮಾಗ್ರಿಗಳ ಕಿಟ್, ಹಣ್ಣು, ಮಾಸ್ಕ್ನ್ನು ಮಂಗಳವಾರ ಪುರಸಭಾ ವಠಾರದಲ್ಲಿ ವಿತರಿಸಲಾಯಿತು. ಈ ಸಂದರ್ಭ ಬಂಟ್ವಾಳ ರೋಟರಿಕ್ಲಬ್ ಅಧ್ಯಕ್ಷ ಶಿವಾನಿ ಬಾಳಿಗಾ, ಮಾಜಿ ಅಧ್ಯಕ್ಷ ಪ್ರಕಾಶ್ ಕಾರಂತ್, ಹರೀಶ್ ಬಾಳಿಗಾ ಬಂಟ್ವಾಳ, ಪುರಸಭಾ ಸದಸ್ಯ ಗೋವಿಂದಪ್ರಭು, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ವಿ.ಐ.ಎಸ್ .ನೆಟ್ ವರ್ಕ್ನ ಸಿ.ಇ.ಒ ಉಮಾಶಂಕರ್ ಬೆಂಗಳೂರು, ಶ್ರೀನಾಥ ಶೆಣ್ಯೆ ಮೊದಲಾದವರಿದ್ದರು. ಕರೋನಾ ವೈರಸ್ ಹಿನ್ನಲೆಯಲ್ಲಿ ಜನತಾಕರ್ಪ್ಯೂವಿನ ಸಂದರ್ಭದಲ್ಲಿಯು ಪೌರಕಾರ್ಮಿಕರು ನಗರದ ಶುಚಿತ್ವದಲ್ಲಿ ತೊಡಗಿಸಿರುವುದು ಮತ್ತು ಮುಖ್ಯಾಧಿಕಾರಿಗಳ ಸಹಿತ ಸಿಬ್ಬಂದಿಗಳ ಕಾರ್ಯವನ್ನು ಅಭಿನಂದಿಸಲಾಯಿತು.
ರೋಟರಿ ಕ್ಲಬ್ ಬಂಟ್ವಾಳ ಹಾಗೂ ವಿ.ಐ.ಎಸ್.ನೆಟ್ವರ್ಕ್ ವತಿಯಿಂದ ಪುರಸಭೆ ಪೌರಕಾರ್ಮಿಕರಿಗೆ ಪಡಿತರ ಕಿಟ್, ಮಾಸ್ಕ್ ವಿತರಣೆ
